ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈದ್ ಮಿಲಾದ್ Eid Milad ಮೆರವಣಿಗೆಯ ವೇಳೆ ನಗರದಲ್ಲಿ ನಡೆದ ಅಹಿತಕರ ಘಟನೆ ಕುರಿತಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ Dr.G.Parameshwar ಅವರ ಉಡಾಫೆ ಉತ್ತರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಹಾಗೂ ಅಹಿತಕರ ಘಟನೆ ಕುರಿತಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇವೆಲ್ಲಾ ಆಗುತ್ತಿರುವುದು ಮೊದಲ ಸಲವೇ? ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ.
ಘಟನೆಯಲ್ಲಿ ಎರಡೂ ಕಡೆಯವರು ಒಬ್ಬರ ಮೇಲೆ ಒಬ್ಬರು ಕಲ್ಲು ತೂರಾಟ ನಡೆಸಿದ್ದಾರೆ. ದೊಡ್ಡ ಮಟ್ಟದ ಯಾವುದೇ ಗಲಭೆ ನಡೆದಿಲ್ಲ. ಪೊಲೀಸರು ಎಲ್ಲವನ್ನೂ ನಿಯಂತ್ರಿಸಿದ್ದಾರೆ ಎಂದರು.
Also read: ಶಿವಮೊಗ್ಗ ಈದ್ ಮೆರಣಿಗೆಯಲ್ಲಿ ಕತ್ತಿ, ಗುರಾಣಿ ಹಿಡಿದಿರಲಿಲ್ಲ: ಗೃಹ ಸಚಿವರ ಸ್ಪಷ್ಟನೆ
ಇಂತಹ ಘಟನೆ ನಡೆಯುವ ಮಾಹಿತಿ ಇಲಾಖೆಗೆ ಮೊದಲೇ ಇತ್ತು. ಹೀಗಾಗಿ, ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಹೊರಗಿನ ಯಾರನ್ನೂ ನಗರಕ್ಕೆ ಬರಲು ಬಿಟ್ಟಿಲ್ಲ. ಹೊರಗಿನವರು ಯಾರೂ ಇಲ್ಲಿ ಬಂದು ಗಲಭೆ ಮಾಡಿಲ್ಲ. ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಯಾರು ಏನಾದರೂ ಮಾತನಾಡಿಕೊಳ್ಳಲಿ. ನಮಗೆ ಅದು ಸಂಬಂಧವಿಲ್ಲ ಎಂದರು.
ಇನ್ನು, ಅಹಿತಕರ ಘಟನೆ ಕುರಿತಾಗಿ ಗೃಹ ಸಚಿವರ ಉತ್ತರಕ್ಕೆ ಎಲ್ಲೆಡೆ ತ್ರೀ ಆಕ್ರೋಶ ವ್ಯಕ್ತವಾಗಿದೆ. ಜವಾಬ್ದಾರಿಯುತ ಗೃಹ ಸಚಿವರ ಸ್ಥಾನದಲ್ಲಿ ಕುಳಿತು ಇಂತಹ ಉಡಾಫೆ ಉತ್ತರ ನೀಡುವುದ ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post