ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ದೊಡ್ಡದಿದೆ. ಈ ಸಾಲಿನಲ್ಲಿ ಪೇಸ್ ಕಾಲೇಜಿನ ಸಾಧನೆಯೂ ಸಹ ಅನವರತವಾಗಿ ಸಾಗುತ್ತಿದ್ದು, ಇದಕ್ಕೆ ಪೇಸ್ ಇಂಟರ್ ನ್ಯಾಶನಕ್ ಸ್ಕೂಲ್ ಹೊಸ ಕೊಡುಗೆಯಾಗಿದೆ ಎಂದು ಮೂಡಬಿದ್ರೆಯ ಪ್ರತಿಷ್ಠಿತ ಆಳ್ವ ಎಜುಕೇಷನ್ ಫೌಂಡೇಶನ್ ಸಂಸ್ಥಾಪಕರಾದ ಡಾ.ಎಂ. ಮೋಹನ್ ಆಳ್ವ #Mohan Alva ಹೇಳಿದರು.
ಪ್ರತಿಷ್ಠಿತ ಪ್ರಜ್ಞಾ ಎಜುಕೇಷನ್ ಟ್ರಸ್ಟ್ ಆಶ್ರಯದ ಮತ್ತೊಂದು ಶಿಕ್ಷಣ ಸಂಸ್ಥೆ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ #PACE International School ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮಕ್ಕಳನ್ನು ಪೇಸ್ ಶಾಲೆಗೆ ದಾಖಲು ಮಾಡುವ ಮೂಲಕ ಶಿಕ್ಷಣ ಸಂಸ್ಥೆಗೆ ಶಕ್ತಿ ತುಂಬಬೇಕಾಗಿ ಮನವಿ ಮಾಡಿಕೊಂಡರು.

ಖಜಾಂಚಿಗಳಾದ ಕೆ.ಈ. ಕಾಂತೇಶ್ ಅವರು ಮಾತನಾಡಿ, ಶಾಲೆಯ ನಿರ್ಮಾಣದಲ್ಲಿ ಡಾ.ಎಂ. ಮೋಹನ್ ಆಳ್ವರವರ ಕೊಡುಗೆಯನ್ನು ಸ್ಮರಿಸಿದರು.
Also read: ಇನ್ಮುಂದೆ ಮಂಗಳೂರಿನಿಂದ ಮುಂಬೈಯನ್ನು ಕೇವಲ 12 ಗಂಟೆಗೆ ತಲುಪಬಹುದು
ಪ್ರಾಸ್ಥಾವಿಕ ನುಡಿಗಳನ್ನಾಡಿದ ಶಾಲೆಯ ಪ್ರಾಂಶುಪಾಲರಾದ ಎನ್. ಆರ್. ಪವನ್ ಕುಮಾರ್ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಹಾಗೂ ಮಕ್ಕಳಲ್ಲಿ 21ನೇ ಶತಮಾನದ ಕೌಶಲಗಳ ಅಭಿವೃದ್ಧಿ ಬಗ್ಗೆ ಅತಿ ಹೆಚ್ಚಿನ ಒತ್ತು ನೀಡಿ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು.
ಟ್ರಸ್ಟ್ನ ಉಪಾಧ್ಯಕ್ಷರಾದ ಪ್ರೊ ಎಚ್. ಆನಂದ್, ಕಾರ್ಯದರ್ಶಿಗಳಾದ ಪ್ರೊ. ಬಿ.ಎನ್. ವಿಶ್ವನಾಥಯ್ಯ ಉಪಸ್ಥಿತರಿದ್ದರು.

ಡಾ.ಎಂ. ಮೋಹನ್ ಆಳ್ವ, ಡಾ. ಸಂಜಯ್ ಶಾಂತಾರಾಮ್ ಮತ್ತು ಕುಮಾರ ಅನಿಕೇತನ್‌ರಿಗೆ ಸನ್ಮಾನಿಸಲಾಯಿತು. ಸಿಂಚನ ಹಾಗೂ ಭವ್ಯ ನಿರೂಪಿಸಿ, ಐಶ್ವರ್ಯಾ ವಿದ್ಯಾಧರ್ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೇಯ ವಂದನಾರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      
 
	    	


 Loading ...
 Loading ... 
							



 
                
Discussion about this post