ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮ ಪಂಚಾಯತ್ ಸದಸ್ಯರ ಜೊತೆಗೆ ಉತ್ತಮ ಭಾವನಾತ್ಮಕ ಸಂಬಂಧ ಹಾಗೂ ಪರಸ್ಪರ ಸಮನ್ವಯತೆಯನ್ನು ಸಾಧಿಸಲು ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳಿಗೆ ಮನರಂಜನೆಗಾಗಿ ಕೆಲವು ಗುಂಪು ಕ್ರೀಡೆಗಳು ಮತ್ತು ವೈಯಕ್ತಿಕ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ MLC D S Arun ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಜಿಲ್ಲೆಯ ಸಂಸದರು ಹಾಗೂ ಶಾಸಕರ ಸಹಕಾರವನ್ನು ಪಡೆದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಒಲಂಪಿಕ್ ಅಸೋಷಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಂಚಾಯತ್ ಕ್ರೀಡಾ ಹಬ್ಬ ಶಿವಮೊಗ್ಗ-2022 ಏರ್ಪಡಿಸಲಾಗಿದೆ.

ತಾಲ್ಲೂಕು ಮಟ್ಟದಲ್ಲಿ ಕ್ರೀಡಾಕೂಟ ನಡೆಯುವ ದಿನಾಂಕಗಳು ಹೀಗಿವೆ:
ಮೇ 29ರ ಭಾನುವಾರ ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, 30ರ ಸೋಮವಾರ ಸಾಗರ ನೆಹರು ಮೈದಾನ, 31ರ ಮಂಗಳವಾರ ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಜೂನ್ 2ರ ಗುರುವಾರ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.

ಗುಂಪು ಕ್ರೀಡೆಗಳು:
ಕಬ್ಬಡ್ಡಿ (ಪುರುಷರಿಗೆ), ಥ್ರೋಬಾಲ್ (ಮಹಿಳೆಯರಿಗೆ), ಹಗ್ಗ ಜಗ್ಗಾಟ (ಪುರುಷರಿಗೆ & ಮಹಿಳೆಯರಿಗೆ), 4×100 ಮೀ ರಿಲೆ (ಪುರುಷರಿಗೆ & ಮಹಿಳೆಯರಿಗೆ),
Also read: ರಾಕಿ ಬಾಯ್ ಪ್ರೇರಣೆಯಿಂದ ಒಂದು ಪ್ಯಾಕ್ ಸಿಗರೇಟ್ ಸೇದಿದ ಬಾಲಕ! ಮುಂದೆ ಆಗಿದ್ದೇನು?
ವೈಯಕ್ತಿಕ ಕ್ರೀಡೆಗಳು:
200 ಮೀ ಓಟ (ಪುರುಷರಿಗೆ), 100 ಮೀ ಓಟ (ಮಹಿಳೆಯರಿಗೆ), ಗುಂಡು ಎಸೆತ-16 ಪೌಂಡ್ (ಪುರುಷರಿಗೆ), ಗುಂಡು ಎಸೆತ-8 ಪೌಂಡ್ (ಮಹಿಳೆಯರಿಗೆ)

ಪುರುಷರ ವೈಯಕ್ತಿಕ ಕ್ರೀಡೆಗಳು:
ಲಗೋರಿ, ಬಾಂಬ್ ಇನ್ ದ ಸಿಟಿ, ಗೋಣಿ ಚೀಲ ಓಟ
ಮಹಿಳೆಯರ ವೈಯಕ್ತಿಕ ಕ್ರೀಡೆಗಳು:
ಸಂಗೀತ ಕುರ್ಚಿ, ಬಾಂಬ್ ಇನ್ ದ ಸಿಟಿ, ಇಟ್ಟಿಗೆ ಓಟ – 20 ಮೀಟರ್
ಗುಂಪು ಕ್ರೀಡೆಗಳು (ಪುರುಷರಿಗೆ ಮತ್ತು ಮಹಿಳೆಯರಿಗೆ) ಒಂದು ತಂಡದಲ್ಲಿ ಕನಿಷ್ಟ 5 ಜನರು ಇರುವುದು.
ಪಗಡೆ ಕ್ರಿಕೆಟ್ (ಪಂಚಾಯಿತಿಗೆ ಒಂದು ತಂಡ)
ಬಾಲ್ ರಿಲೇ (ಪಂಚಾಯಿತಿಗೆ ಒಂದು ತಂಡ)

ವಿಶೇಷ ಸೂಚನೆ: ಗುಂಪು ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ವಿಜೇತರಾದವರು ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಒಂದು ವೈಯಕ್ತಿಕ ಹಾಗೂ ಒಂದು ಗುಂಪು ಮನೋರಂಜನಾ ಕ್ರೀಡೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















