ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ಆಯೋಜಿಸಲಾಗಿದ್ದ ಪೋಷಕರ ಕ್ರೀಡಾಕೂಟ ಸಮ್ಮಿಲನ ಎಂಬ ಅಪರೂಪದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಪೋಷಕರುಗಳು ಮಕ್ಕಳಂತೆ ಆಡಿ ನಲಿದರು.

ಸಂಸ್ಥೆ ಹಾಗೂ ಪೋಷಕರೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವುದು ಈ ಕ್ರೀಡಾಕೂಟದ ಉದ್ದೇಶವಾಗಿತ್ತು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕ್ರೀಡೆಗಳು ನಡೆದವು.
ಮಹಿಳೆಯರಿಗಾಗಿ ಬುಕ್ ಬ್ಯಾಲೆನ್ಸ್, ಪುರುಷರಿಗೆ ಗನ್ನಿ ಬ್ಯಾಗ್ ರೇಸ್, ದಂಪತಿಗಳಿಗೆ ಬಲೂನ್ ಬ್ಯಾಲೆನ್ಸ್, ತ್ರೀ ಲೆಗ್ ರೇಸ್, ಮಹಿಳೆಯರಿಗೆ ತ್ರೋಬಾಲ್, ಪುರುಷರಿಗೆ ವಾಲಿಬಾಲ್ ಪಂದ್ಯವನ್ನು ಏರ್ಪಡಿಸಲಾಗಿತ್ತು.

ಈ ಕ್ರೀಡೆಯಲ್ಲಿ ಎಲ್ಲಾ ಪೋಷಕರು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕುತ್ತಾ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಮ್ಮ ಸಿಹಿ ಅನುಭವಗಳನ್ನು ಈ ಸಮ್ಮಿಲಿನ ವೇದಿಕೆಯ ಮೂಲಕ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸ್ವಯಂ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪ್ರೇರಣೆಯನ್ನು ತುಂಬಿ ಪ್ರೋತ್ಸಾಹ ನೀಡಿದರು.
Also read: ಶಿವಮೊಗ್ಗ | ವಿದ್ಯಾನಗರ ಫ್ಲೈಓವರ್ ಉದ್ಘಾಟನೆ ಕುರಿತು ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಾಂಶುಪಾಲರಾದ ಎನ್. ಪ್ರಿಯದರ್ಶಿನಿ, ಸಂಯೋಜಕಿ ದಿವ್ಯಾ ಶೆಟ್ಟಿ, ಸಿಇಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯ್ ಕುಮಾರ್, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















