ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ಪತ್ರಿಕಾ ದಸರಾ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಹಾಗೂ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಭಾಷಣ ಸ್ಪರ್ಧೆಯನ್ನು ಸೆ.24ರ ಸಂಜೆ 4 ಗಂಟೆಗೆ ಪತ್ರಿಕಾ ಭವನದಲ್ಲಿ ನಡೆಸಲಾಗುವುದು. ಆಧುನಿಕ ಭಾರತ ಅಥವಾ ಭಾರತದ ಗತ ವೈಭವ ಈ ವಿಷಯಗಳಲ್ಲಿ ಒಂದು ವಿಷಯದ ಬಗ್ಗೆ 5 ರಿಂದ 10 ನಿಮಿಷ ಭಾಷಣ ಮಾಡಬೇಕು. ಇದಕ್ಕೆ ಸೆ.22 ರೊಳಗೆ ಹೆಸರು ನೋಂದಾಯಿಸಬೇಕು.
ಪ್ರಬಂಧ: ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಪ್ರಬಂಧವನ್ನು ಬರೆದು ಸೆ.25 ರೊಳಗೆ ಶಿವಮೊಗ್ಗ ಟೈಮ್ಸ್ ಪತ್ರಿಕೆ ಕಚೇರಿ, ಗಾಂಧಿನಗರ ಮುಖ್ಯ ರಸ್ತೆ ಶಿವಮೊಗ್ಗ ಇಲ್ಲಿಗೆ ಪೋಸ್ಟ್ ಅಥವಾ ಖುದ್ದಾಗಿ ತಲುಪಿಸಬೇಕು.
ವಿಜೇತರಿಗೆ ಸೆ.28ರಂದು ನಡೆಯುವ ಪತ್ರಿಕಾ ದಸರಾ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು. ಮಾಹಿತಿಗಾಗಿ ಮೊ. 91416 30025, 9448628133 ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















