ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಅಪಾರ ಜನಸ್ತೋಮದ ನಡುವೆ, ಶಾಂತಿಯುತವಾಗಿ ಪೂರ್ಣಗೊಂಡಿದೆ.
ಸೆ.17ರ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ಭೀಮೇಶ್ವರ ದೇವಾಲಯ ಆವರಣದಿಂದ ಆರಂಭಗೊಂಡ ಗಣಪತಿ ಮೆರವಣಿಗೆ, ಸೆ. 18 ರ ಮುಂಜಾನೆ ಸರಿಸುಮಾರು 4. 15ಗಂಟೆಗೆ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಗಣೇಶಮೂರ್ತಿಯ ವಿಸರ್ಜನೆ ಮಾಡಲಾಯಿತು.
ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿ, ವ್ಯಾಪಕ ಕಟ್ಟೆಚ್ಚರವಹಿಸಿತ್ತು. ಭದ್ರತಾ ಕಾರ್ಯಕ್ಕೆ ಕ್ರಿಪ್ರ ಕಾರ್ಯಾಚರಣೆ ಪಡೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಳಕೆ ಮಾಡಲಾಗಿತ್ತು. ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.
Also read: HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಹೈಕೋರ್ಟ್ ವಿಸ್ತರಣೆ | ಎಲ್ಲಿಯವರೆಗೂ?
ಸುಗಮ – ಶಾಂತಿಯುತ ಮೆರವಣಿಗೆಗಾಗಿ ಕಳೆದ ಹಲವು ದಿನಗಳ ಕಾಲ, ಶಿವಮೊಗ್ಗ ನಗರದಲ್ಲಿ ಶಾಂತಿ ಸಮಿತಿ ಸಭೆ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರ ಪಥ ಸಂಚಲನ ಕೂಡ ನಡೆಸಲಾಗಿತ್ತು. ಪೊಲೀಸ್ ಇಲಾಖೆಯ ಅವಿರತ ಶ್ರಮ, ಸಾರ್ವಜನಿಕರ ಸಹಕಾರದಿಂದ ಭಾರೀ ಜನಸ್ತೋಮದ ನಡುವೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.
ಎಸ್‌ಪಿ ಮಿಥುನ್ ಕುಮಾರ್ ಸಂತಸ:
ಗಣಪತಿ ಮೆರವಣಿಗೆಯು ಶಾಂತಿಯುತವಾಗಿ ಪೂರ್ಣಗೊಂಡಿರುವುದಕ್ಕೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮೆರವಣಿಗೆ ಬಂದೋಬಸ್ತ್ ನಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಹಾಗೂ ಇದಕ್ಕೆ ಸಹಕಾರ ನೀಡಿದ ಸಮಾಜದ ಎಲ್ಲ ವರ್ಗದವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post