ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ನಡುವೆಯೇ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮಲೆನಾಡಿನ ಮಂದಿ ಭರ್ಜರಿ ಸಿದ್ದತೆ ನಡೆಸಿದ್ದು, ಇದರ ನಡುವೆ ಪೇಟೆಯಲ್ಲಿ ಸಾಮಾಜಿಕ ಅಂತರ ಕಾಣದಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಹೂವಿನ ಮಾರುಕಟ್ಟೆ ಹಾಗೂ ಗೋಪಿ ಸರ್ಕಲ್’ನಲ್ಲಿ ವ್ಯಾಪಾರ ಜೋರಾಗಿತ್ತು.
ಕೊರೋನಾ ವೈರಸ್ ಹರಡುವಿಕೆಯ ಜಾಗ್ರತೆಯೇ ಇಲ್ಲದಂತೆ ಜನರು ಖರೀದಿಯಲ್ಲಿ ಮುಗಿ ಬಿದ್ದಿದ್ದು ಕಂಡು ಬಂದಿತು.
ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಎಂಬುದು ಮಾಯವಾಗಿದ್ದು, ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳೇ ಇಲ್ಲದೇ ವ್ಯಾಪಾರ ವಹಿವಾಟು ನಡೆದಿತ್ತು.
Get In Touch With Us info@kalpa.news Whatsapp: 9481252093














