ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ತಾವು ನೇಮಕಗೊಂಡ ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಹೊಂದಿರಬೇಕು ಎಂದು ಪಿಇಎಸ್ ಟ್ರಸ್ಟ್‌ನ ಸಿಇಓ ಎಸ್.ವೈ ಉಮಾದೇವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪಿಇಎಸ್‌ನಲ್ಲಿ ಮೆಕ್ಯಾನಿಕಲ್ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೆಸರಾಂತ ಡಿಎಫ್‌ಎಂ ಟೆಕ್ನಾಲಜಿಯ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂಪನಿಯ ನಿರ್ದೇಶಕಿ ಪ್ರಮೀನ ರಾಮ ಹಾಗೂ ಉಪಾಧ್ಯಕ್ಷ ನೀಲಾದ್ರಿ ರಾಮ ಅವರು ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಯ ಬಗ್ಗೆ ತಿಳಿಸಿಕೊಟ್ಟರು.
ಡಿಎಫ್‌ಎಂ ಟೆಕ್ನಾಲಜಿಯು, ಕಳೆದ ೨೩ ವರ್ಷಗಳಿಂದ, ತೈಲ, ಅನಿಲ ಮತ್ತು ಏರೋಸ್ಪೇಸ್ ವಲಯಗಳಿಗೆ ಬೇಕಾಗುವ ಘಟಕಗಳನ್ನು ತಯಾರಿಸುತ್ತಿದೆ. ಇಂಜಿನಿಯರಿಂಗ್ (ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್) , ಡಿಪ್ಲೋಮ ಹಾಗೂ ಡಿಗ್ರಿ (ಬಿ.ಬಿ.ಎ/ಬಿ.ಕಾಮ್) ಗಳ ಪದವೀಧರರಿಗೆ ಈ ಕಂಪನಿಯಿಂದ ಉದ್ಯೋಗಾವಕಾಶಗಳು ದೊರೆಯಲಿವೆ.
ಪ್ರಸಕ್ತ ವರ್ಷದ ಉದ್ಯೋಗ ಮಾರುಕಟ್ಟೆಯಲ್ಲಿ, ಕೋರ್ ಇಂಜಿನಿಯರಿಂಗ್ ವಿಭಾಗಗಳಾದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಸಿವಿಲ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಈ ವರ್ಷದ, ಕೋರ್ ಇಂಜಿನಿಯರಿಂಗ್ ವಿಭಾಗಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ, ಟಾಟಾ ಎಲಕ್ಸಿ, ಪ್ರಗತಿ ಆಟೋಮೇಷನ್, ಪ್ರೇರಣಾ ಇಂಜಿನಿಯರಿಂಗ್ ವರ್ಕ್ಸ್, ಇಂಡಸ್ ಟವರ್, ಎನ್ವೆಂಚರ್, ಐ ಟಿ ಸಿ ಫುಡ್ಸ್, ಓಜಸ್ ಪವರ್, ತ್ರಿವೇಣಿ ಟರ್ಬೈನ್, ಟೊಯೋಟಾ, ಇಂಡೋ ಎಂ ಐ ಎಂ, ಸಂವಿದ್ ಬಿಲ್ಡ್ ಟೆಕ್, ಒರಾಯನ್ ಗ್ರೂಪ್ಸ್, ರೇನಿ ಫಿಲ್ಟರ್ ಹೀಗೆ ಇನ್ನೂ ಅನೇಕ ಕಂಪನಿಗಳು ಭಾಗವಹಿಸಿದ್ದವು ಎಂದು ಪಿಇಎಸ್ ಟ್ರಸ್ಟ್ನ ಕೆರಿಯರ್ ಡೆವಲಪ್ಮೆಂಟ್ ಸೆಂಟರ್ ನ ಮುಖ್ಯಸ್ಥ, ಡಾ.ಪ್ರಸನ್ನ ಕುಮಾರ್.ಟಿ.ಎಂ ಅವರು ತಿಳಿಸಿದರು.
Also read: ತಪ್ಪಿದ ಭಾರೀ ದುರಂತ : ಶಿವಸೇನೆ ನಾಯಕಿ ಸುಷ್ಮಾ ತೆರಳಬೇಕಿದ್ದ ಹೆಲಿಕಾಪ್ಟರ್ ಪತನ
ಕೋರ್ ಇಂಜಿನಿಯರಿಂಗ್ ವಿಭಾಗಗಳನ್ನು ಒಳಗೊಂಡಂತೆ ಉಳಿದ ವಿಭಾಗಗಳನ್ನು ಪರಿಗಣಿಸಿದರೆ. ಈ ಶೈಕ್ಷಣಿಕ ವರ್ಷದಲ್ಲಿ ಇಲ್ಲಿಯವರೆಗೆ ಪಿಇಎಸ್, 650 ಕ್ಕೂ ಅಧಿಕ ಆಫರ್ ಲೆಟರ್ ಗಳನ್ನು ಪಡೆದುಕೊಂಡಿದೆ. ಹಾಗೂ ಇನ್ನು ಅನೇಕ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ಪಿಇಎಸ್ ಟ್ರಸ್ಟ್ ನ ಮುಖ್ಯ ಸಂಯೋಜಕ ಆಡಳಿತಾಧಿಕಾರಿ, ಡಾ. ಆರ್. ನಾಗರಾಜ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post