ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಶ್ವಿಜ ಯಕ್ಷ ಸಂಭ್ರಮ 2024ರ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಅ.20ರ ಭಾನುವಾರದಂದು ಸಂಜೆ 5.30ಕ್ಕೆ ಶನೀಶ್ವರಾಂಜನೇಯ-ಭಸ್ಮಾಸುರ ಮೋಹಿನಿ ಎಂಬ ಎರಡು ಪೌರಾಣಿಕ ಯಕ್ಷಗಾನ #Yakshagana ಪ್ರಸಂಗಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ ತಿಳಿಸಿದ್ದಾರೆ.
ಹಿಮ್ಮೇಳದಲ್ಲಿ ಗಾನ, ರಾಗ, ಸ್ವರ, ಮೃದಂಗ, ಚಂಡೆಯಲ್ಲಿ ಕ್ರಮವಾಗಿ ಕೊಳಗಿ ಕೇಶವ ಹೆಗಡೆ, ಸುರೇಶ ಶೆಟ್ಟಿ ಎಸ್., ವಿನಯ ಶೆಟ್ಟಿ, ಎ.ಪಿ.ಪಾಠಕ್, ಶಿವಾನಂದ ಕೋಟ, ನವೀನ್ ಎನ್.ಜೆ., ಇರುತ್ತಾರೆ. ಹಾಗೆಯೇ ವಿವಿಧ ಪಾತ್ರಗಳಲ್ಲಿ ಗಣಪತಿ ನಾಯ್ಕ, ಸುಬ್ರಹ್ಮಣ್ಯ ಚಿಟ್ಟಾಣಿ, ವಿದ್ವಾನ್ ದತ್ತಮೂರ್ತಿ ಭಟ್, ಅಶೋಕ್ ಭಟ್, ನರಸಿಂಹ ಚಿಟ್ಟಾಣಿ, ಸದಾಶಿವ ಭಟ್, ನಾಗಶ್ರೀ ಜಿ.ಎಸ್., ನವ್ಯ ವಿ.ಭಟ್, ಮಹಾಬಲೇಶ್ವರ ಭಟ್, ವೆಂಕಟೇಶ್, ಪ್ರದೀಪ್ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ.
Also read: ತೀರ್ಥಹಳ್ಳಿ | ಬಸ್ ಢಿಕ್ಕಿಯಾಗಿ ವಿದ್ಯಾರ್ಥಿ ಸಾವು

ಟಿಕೆಟ್ ಮತ್ತು ಹೆಚ್ಚಿನ ವಿವರಗಳಿಗೆ 9480473311, 8217318814ನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post