ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿ ಗಲಭೆ ಸೃಷ್ಟಿಸಿದ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಇನ್ನೊಮ್ಮೆ ಫ್ಲೆಕ್ಸ್ ಮುಟ್ಟಿದರೆ ಏನಾಗುತ್ತದೆ ಎನ್ನುವ ಎಚ್ಚರಿಕೆಯೂ ಈ ನಿಷೇಧದ ಹಿಂದೆ ಅಡಗಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಗುಡುಗಿದರು.
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಶ್ರೀಗಂಧ ಹಾಗೂ ಸಾಮಗಾನ ಸಂಸ್ಥೆಯ ವತಿಯಿಂದ ನಡೆದ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಸಾವರ್ಕರ್ ಪಟ್ಟ ಕಷ್ಷ ಒಂದು ಕಡೆ ಆಗಿದೆ. ಸ್ವಾತಂತ್ಯ್ಯ ಬಂದ ನಂತರ ಕಿಡಿಗೇಡಿ ಸಂಘಟನೆಗಳಿಂದ ಅವರ ಭಾವ ಚಿತ್ರ ಹರಿಯಲು ಕಾರಣವಾಗಿತ್ತು. ಹೀಗೆ ಮಾಡಿದ ಸಂಘಟನೆ ಇಂದು ನಿಷೇಧಿಸಲಾಗಿದೆ ಎಂದರು.

ಶಿವಮೊಗ್ಗ ದಲ್ಲಿ ಆಗಸ್ಟ್ 14 ರಂದು ವೀರ ಸಾವರ್ಕರ್ ಅವರಿಗೆ ದೊಡ್ಡ ಅಪಮಾನವಾಯಿತು. ಅವರುಗಳಿಗೆ ಶಿವಮೊಗ್ಗ ದೊಡ್ಡ ಶಕ್ತಿ ಕೇಂದ್ರ ಎಂದು ಗೊತ್ತಿರಲಿಲ್ಲ. ಈಗ ವೀರ ಸಾವರ್ಕರ್ ವಿಚಾರಧಾರೆ ಜ್ಯೋತಿ ಕರ್ನಾಟಕದಲ್ಲಿ ಪ್ರಜ್ವಲಿಸುತ್ತಿದೆ. ಇದು ಇನ್ನೂ ಪ್ರಜ್ವಲಿಸಲಿದೆ ಎಂದರು.











Discussion about this post