ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿ ಹಾಗೂ ಷರತ್ತುಗಳಿಗೆ ಸ್ಥಳೀಯರು ಒಪ್ಪಿದರೆ ಹೊಸನಗರದ ಒಳಗೆ ಹೆದ್ದಾರಿಯನ್ನು ನಿರ್ಮಿಸಲಾಗುತ್ತದೆ ಎಂದು ಸಾಗರ ಶಾಸಕ ಎಚ್. ಹಾಲಪ್ಪ MLA Halappa ಹೇಳಿದ್ದಾರೆ.
ಪತ್ರಿಕಾಗೋಷ್ಠೀಯಲ್ಲಿಂದು ಮಾತನಾಡಿದ ಅವರು, ಬೈಪಾಸ್ ರಸ್ತೆ ಕುರಿತಾಗಿ ಕೆಲವೊಂದು ನಿಯಮಾವಳಿಗಳು ಇವೆ. ಒಂದು ವೇಳೆ ಪಟ್ಟಣದ ಒಳಗೆ ಹೆದ್ದಾರಿ ಹಾದುಹೋಗಬೇಕಾದರೆ ಅದಕ್ಕೆ ಅಗತ್ಯವಿರುವ ಜಾಗವನ್ನು ಜನರು ಬಿಟ್ಟುಕೊಡಬೇಕು. ಒಂದು ವೇಳೆ ಇಂತಹ ಸಂದರ್ಭದಲ್ಲಿ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳುತ್ತದೆ ಎಂದರು.
ಈ ಕುರಿತಂತೆ ಸಂಸದರು ಹಾಗೂ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರಾಧಿಕಾರದ ನಿಯಮ ಹಾಗೂ ಷರತ್ತುಗಳಿಗೆ ಸ್ಥಳೀಯರು ಒಪ್ಪಿ ಸಹಕಾರ ನೀಡುವುದಾದರೆ ಪಟ್ಟಣದ ಒಳಗಿನಿಂದಲೇ ಹೆದ್ದಾರಿ ನಿರ್ಮಾಣ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.
Also read: ವಿಧಾನ ಪರಿಷತ್’ಗೆ ಅವಿರೋಧ ಆಯ್ಕೆಯಾದ ಏಳು ಮಂದಿ: ಯಾವ ಪಕ್ಷಕ್ಕೆ ಎಷ್ಟು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post