ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರು #PM Modi ವಿಕಸಿತ ಭಾರತದ ದಾರಿಯಲ್ಲಿದ್ದು, ಇದು ಅಮೃತ ಕಾಲವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದರು.
ಅವರು ಇಂದು ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದ ಸಮೀಪವಿರುವ ಸರ್ಜಿ ಫರ್ಟಿಲಿಟಿ ಅಂಡ್ ರಿಸರ್ಚ್ ಸೆಂಟರ್‍ನ ಮೊದಲ ಮಹಡಿಯಲ್ಲಿ ಹಮ್ಮಿಕೊಂಡಿದ್ದ ಮೋದಿ ಸರ್ಕಾರದ 11 ವರ್ಷದ ಸಾಧನೆಯ ಪ್ರದರ್ಶಿನಿ ಮತ್ತು ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಎಂ.ಜಿ. ಭಟ್ ಮಾತನಾಡಿ, 2014ರಲ್ಲಿ ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಹಿಂದೂಗಳ ಸ್ವಾತಂತ್ರ ಮುರಿಯುವ ಬಿಲ್ ಮಂಡನೆಗೆ ಸಿದ್ಧವಾಗಿತ್ತು. ಕೋಮುಗಲಭೆಯಾದಲ್ಲಿ ಹಿಂದೂಗಳನ್ನೇ ಟಾರ್ಗೇಟ್ ಮಾಡುವುದು, ಅನ್ಯಕೋಮಿನವರು ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದಾಗ ಆರೋಪಿಯನ್ನು ಬಂಧಿಸುವ ಬದಲು ಹಿಂದೂ ಹೆಣ್ಣುಮಕ್ಕಳ ಹೇಳಿಕೆಯನ್ನೇ ತೆಗೆದುಕೊಂಡು ಆಕೆಯನ್ನು ಆರೋಪಿ ಎನ್ನುವ ರೀತಿಯಲ್ಲಿ ಬಿಂಬಿಸುವ ಕಾನೂನನ್ನು ತರಲು ಯುಪಿಎ ಸರ್ಕಾರ ಹೊರಟಿತ್ತು. ಆದರೆ ಅದೃಷ್ಟುವಶಾತ್ ಅದು ಸಾಧ್ಯವಾಗಲಿಲ್ಲ. 1975ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಕುರ್ಚಿಗೆ ಕುತ್ತು ಬಂದಿದೆ ಎಂಬ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿ ದೇಶದ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಿ, ಜೈಲಿಗಟ್ಟುವ ಕೆಲಸ ಮಾಡಿತ್ತು. ವಿದೇಶಗಳಲ್ಲಿ ನಮ್ಮ ನಾಯಕರು ತಲೆತಗ್ಗಿಸಿ ನಿಲ್ಲುತ್ತಿದ್ದರು. ನಮ್ಮನ್ನು ಭಿಕ್ಷುಕರಂತೆ ನೋಡುತ್ತಿದ್ದರು. ಸಾಲ ಕೇಳುವ ದಯನೀಯ ಪರಿಸ್ಥಿತಿ ನಮ್ಮ ದೇಶಕ್ಕಿತ್ತು. ಆದರೆ ಮೋದಿ ಸರ್ಕಾರ ಬಂದ ಮೇಲೆ ವಿಶ್ವಮಾನ್ಯತೆ ಲಭಿಸುತ್ತಿದೆ. ಎಲ್ಲಾ ದೇಶಗಳು ನಮ್ಮೆದುರು ತಲೆತಗ್ಗಿಸಿ ನಿಲ್ಲುವ ಪರಿಸ್ಥಿತಿ ಬಂದಿದೆ. ಶ್ರೀಮಂತ ದೇಶಗಳ ಪಟ್ಟಿಗೆ ನಾವು ಸೇರಿದ್ದೇವೆ. ಇದು ಎನ್‍ಡಿಎ ಸರ್ಕಾರದ ಸಾಧನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕರಾದ ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಪ್ರಮುಖರಾದ ಆರ್.ಕೆ. ಸಿದ್ರಾಮಣ್ಣ, ಮೋಹನ್‍ರೆಡ್ಡಿ, ಹರಿಕೃಷ್ಣ, ವಿನ್ಸೆಂಟ್ ರೋಡ್ರಿಗಸ್, ಜ್ಞಾನೇಶ್ವರ್, ಗಣೇಶ್ ಬಿಳಕಿ, ದರ್ಶನ್ ಸೇರಿದಂತೆ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post