ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿ ಪಿ.ಎಂ ಸ್ವಾನಿಧಿ ಮಹೋತ್ಸವ ಕಾರ್ಯಕ್ರಮವನ್ನು ಡಿ.19 ರಿಂದ 24ರವರೆಗೆ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಬೀದಿ ಬದಿ ವ್ಯಾಪಾರಿಗಳು Street Vendors ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ.
19ರ ಸೋಮವಾರ ಬೆಳಿಗ್ಗೆ 9 ರಿಂದ ಡಾ. ಬಿ.ಆರ್.ಅಂಬೇಡ್ಕರ ಭವನ ಆವರಣದಲ್ಲಿ ಮಹಿಳೆ ಮತ್ತು ಪುರಷರಿಗೆ ವಿವಿಧ ಕ್ರೀಡೆಗಳು ಹಗ್ಗಜಗ್ಗಾಟ ಸ್ಪರ್ಧೆ, 10 ಜನರ ಗುಂಪಿನ ತಂಡ, ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ, ಸ್ಪರ್ಧೆ, ಪುರುಷರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ, 10 ಜನರ ಗುಂಪಿನ ತಂಡ, ಸಂಗೀತ ಕುರ್ಚಿ, ಫಾಸ್ಟ್ ವಾಕ್, ಸ್ಪರ್ಧೆ,ಬೀದಿ ವ್ಯಾಪಾರಸ್ಥರ ಗಂಡು ಮತ್ತು ಹೆಣ್ಣು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರ ಕಲೆ, ಮತ್ತು ಕಪ್ಪೆ ಜಿಗಿತ ಸ್ಪರ್ಧೆಗಳು, ಪ್ರೌಢಶಾಲೆ ಮಕ್ಕಳಿಗೆ ರಾಷ್ಟ್ರ ನಾಯಕರ ಛದ್ಮವೇಷ ಸ್ಪರ್ಧೆ 100 ಮೀ ಓಟ, ಪಿಯುಸಿ ವಿದ್ಯಾರ್ಥಿಗಳಿಗೆ 100 ಮೀ ಓಟ, ಪದವಿ ವಿದ್ಯಾರ್ಥಿಗಳಿಗೆ 100 ಮೀ ಓಟ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, 100 ಮೀ ಓಟ ಏರ್ಪಡಿಸಲಾಗಿದೆ.
20ರ ಮಂಗಳವಾರ ಬೆಳಿಗ್ಗೆ 9 ರಿಂದ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ದೇಶಭಕ್ತಿ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳು ತರಬೇತಿಯಲ್ಲಿ ನೀಡಿದ, ಹ್ಯಾಂಡ್ ಗ್ಲೌಸ್ ಹಾಕಿರಬೇಕು, ತಲೆಯ ಕೂದಲು ಉದರದಂತೆ ಕ್ಯಾಪ್ ಹಾಕಿರಬೇಕು, ಬಾಯಿಗೆ ಮಾಸ್ಕ್, ಮತ್ತು ಏಫ್ರಾನ್ ಕಡ್ಡಾಯವಾಗಿ ಧರಸಿರಬೇಕು ಆಹಾರ ಅಂಗಡಿ ಸುತ್ತಲು ಸ್ವಚ್ಛತೆ ಇರಬೇಕು, ಕುಡಿಯಲು ಶುದ್ದ ನೀರು, ಆಹಾರಕ್ಕೆ ಬಣ್ಣ ಹಾಗೂ ಟೆಸ್ಟಿಂಗ್ ಪೌಡರ್ ಹಾಕಬಾರದು, ಹಾಗೂ ಒಮ್ಮೆ ಕರಿದ ಎಣ್ಣೆ ಪುನ: ಬಳಸಬಾರದು, ಅಧಿಕಾರಿಗಳು ಹಾಗೂ ತೀರ್ಪುಗಾರರು ಅನಿರೀಕ್ಷಿತ ಬೇಟಿ ನೀಡಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. FSSAI ಪಾಲಿಕೆಯಿಂದ ಆಹಾರ ಸುರಕ್ಷತೆ ಪ್ರಮಾಣ ಪತ್ರ ಪಡೆದ 1000 ಅಭ್ಯರ್ಥಿಗಳು ಅರ್ಹರು ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು.
ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಸ್ಪಾಲ್
24ರ ಶನಿವಾರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆಯುವ ಸಮಾರೊಪ ಸಮಾರಂಭದ ಕಾರ್ಯಕ್ರಮದಲ್ಲಿ ಮೊದಲು ಬಂದ 15 ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಸ್ಟಾಲ್ ನೀಡಲಾಗುವುದು.

24ರ ಶನಿವಾರದಂದು ಸ್ವ ನಿಧಿಸೇ ಸಮೃದ್ದಿ ಯೋಜನೆಯಡಿ ಸ್ಥಳದಲ್ಲೆ ವ್ಯಾಪಾರಿಗಳಿಗೆ ಸಾಲ ನೀಡಲಾಗುವುದು, ಅಂದು ವಿಜೇತ ಕ್ರೀಡಾಪಟುಗಳಿಗೆ ಗಣ್ಯರಿಂದ ಬಹುಮಾನ ವಿತರಣೆಯನ್ನು ಸೈನ್ಸ್ ಮೈದಾನ B.H. ರಸ್ತೆ, ಶಿವಮೊಗ್ಗ. ಇಲ್ಲಿ ನೀಡಲಾಗುವುದು. ಬೀದಿಬದಿ ಕುಟುಂಬ ಸದಸ್ಯರು ಸ್ವಾನಿಧಿ ಮಹೋತ್ಸವ ಹಬ್ಬದಲ್ಲಿ ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದೆ.
Also read: ಬದುಕಿನ ದ್ವಂದಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ: ಡಾ. ಸಂಬಿತ್ ಪಾತ್ರ ಅಭಿಮತ
ವಿಶೇಷ ಸೂಚನೆ:
ಕ್ರೀಡೆಯಲ್ಲಿ ಭಾಗವಹಿಸಲು ಬೀದಿಬದಿ ಗುರುತಿನ ಚೀಟಿ/ ಮಾರಾಟ ಪ್ರಮಾಣ ಪತ್ರ/ಸಾಲ ಪಡೆದಿರುವ ಬ್ಯಾಂಕ್ ಪಾಸ್ ಪುಸ್ತಕ, ಮತ್ತು ಮಕ್ಕಳ ಶಾಲಾ ವ್ಯಸಾಂಗ ಧೃಡೀಕರಣ ಪತ್ರ, ಕಡ್ಡಾಯವಾಗಿ ತರತಕ್ಕದ್ದು.
ಮಹಾನಗರ ಪಾಲಿಕೆಯ ಬೀದಿಬದಿ ವ್ಯಾಪಾರಿಗಳು ಗುರುತಿನ ಚೀಟಿ ಹೊಂದಿದ/ ಸ್ವಾನಿಧಿ ಸಾಲ ಪಡೆದ/ LOR ಪತ್ರ ಪಡೆದ ನಗರದ ಎಲ್ಲಾ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.












Discussion about this post