ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪದವಿ ತರಗತಿಗಳಿಗೆ ಪಠ್ಯಗಳ ಅಳವಡಿಸುವುದರ ಜೊತೆಗೆ ಅದನ್ನು ಹೇಗೆ ಬೋಧಿಸಬೇಕು ಎಂಬುದನ್ನು ನಾವಿಂದು ಕಲಿಸಬೇಕಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಹೇಳಿದರು.
ಅವರು ಇಂದು ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ನಾತಕ ರಾಜ್ಯಶಾಸ್ತ್ರ ಪಠ್ಯಕ್ರಮ(ಎಸ್‍ಇಪಿ) ಕುರಿತ ಒಂದು ದಿನದ ಕಾರ್ಯಾಗಾರವನ್ನು ಸಂವಿಧಾನ ಪೀಠಿಕೆಯನ್ನು ಬೋಧಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಪಠ್ಯಗಳಾಗಲಿ ರಚಿಸುವುದು ಅದಕ್ಕೆ ಕಾಲನಿಗಧಿ ಮಾಡುವುದು ಮುಖ್ಯವಾದರೂ ಕೂಡ ಆ ಪಠ್ಯಕ್ರಮವನ್ನು ಉಪನ್ಯಾಸಕರು ಹೇಗೆ ಬೋಧಿಸಬೇಕು ಎಂಬುದನ್ನು ನಾವು ಉಪನ್ಯಾಸಕರಿಗೆಯೇ ಕಾರ್ಯಾಗಾರ ಮಾಡುವ ತುರ್ತು ಇಂದಿದೆ. ಶಿಕ್ಷಕರು ಪಠ್ಯವನ್ನು ಬೋಧಿಸುವುದರ ಜೊತೆಗೆ ಅದನ್ನು ಚರ್ಚೆಮಾಡಲು ಪೂರಕವಾತಾವರಣವನ್ನು ಕಲ್ಪಿಸಬೇಕು ಮತ್ತು ಯಾವುದೇ ಪಠ್ಯ ಇರಲಿ ಅದನ್ನು ವರ್ತಮಾನದ ವಿಷಯಗಳನ್ನ ಸಮೀಕರಿಸಬೇಕಾಗುತ್ತದೆ. ಪಠ್ಯದ ಆಚೆಗೂ ಅವರು ನಿಂತು ನೋಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುವೆಂಪು ವಿ.ವಿ. ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಪ್ರೊ.ಪ್ರಹ್ಲಾದ್ ಎಂ.ಹೆಚ್. ಶಿಕ್ಷಣ ಕುತೂಹಲವನ್ನು ಹುಟ್ಟಿಸುತ್ತದೆ ಮತ್ತು ಪಠ್ಯಗಳು ವಿದ್ಯಾರ್ಥಿಗಳ ಆಧಾರಸ್ತಂಭಗಳಾಗಿವೆ. ರಾಜ್ಯಶಾಸ್ತ್ರಕ್ಕೆ ಈಗ ಎಲ್ಲಿಲ್ಲದ ಗೌರವ ಬರುತ್ತಿದೆ. ಪಠ್ಯಗಳನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳ ಸಾಮಥ್ರ್ಯಗಳನ್ನು ವೃದ್ಧಿಸಬೇಕು. ಉಪನ್ಯಾಸಕರಿಗೆ ಪಠ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಎಸ್‍ಇಪಿಯ ಉದ್ದೇಶಗಳನ್ನ ತಿಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಪ್ರಸನ್ನಕುಮಾರ್ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಸಿರಾಜ್ ಅಹ್ಮದ್, ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಷಣ್ಮುಖ ಎ., ರಾಜ್ಯಶಾಸ್ತ್ರ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ಉದ್ದಗಟ್ಟಿ ವೆಂಕಟೇಶ್, ಪರೀಕ್ಷಾ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಎಂ.ಸಿ., ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಬಸವರಾಜ್, ಡಾ. ಜಗದೀಶ್, ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್. ಮಂಜುನಾಥ್, ಸಂಘದ ನಿರ್ದೇಶಕಿ ಶ್ರೀದೇವಿ ಬಿ.ಡಿ., ಮಂಜುಳಾ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post