ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಸಂಸ್ಥಾಪನಾ ದಿನದ ನಿಮಿತ್ತ ಪೋಷಣ ಅಭಿಯಾನದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರವೀಂದ್ರ ನಗರ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಸರ್ಕಾರೀ ಶಾಲೆಯ ಆವರಣದ ಸರಸ್ವತಿ ಮಂದಿರದಲ್ಲಿ ಅಂಗನವಾಡಿ ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಾದ ಸುಮಾ, ಬಸಮ್ಮ, ಸಾಧಿಕ್, ಆಶಾ ಕಾರ್ಯಕರ್ತೆಯರ ಭಾಗ್ಯ, ವೇಣಿ ದಾದಿಯಾದ ಪ್ರೇಮ , ವೈದ್ಯಾಧಿಕಾರಿ ಡಾಕ್ಟರ್ ಉಮಾ ಇವರುಗಳನ್ನು ಗೌರವಿಸಲಾಯಿತು.
Also read: ಅತಿಶೀಘ್ರದಲ್ಲೇ ಈಶ್ವರಪ್ಪ ಆರೋಪ ಮುಕ್ತರಾಗಲಿ: ವಿಶೇಷ ಪೂಜೆ ಸಲ್ಲಿಕೆ
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರುದ್ರೇಗೌಡ್ರು , ಡಿ.ಎಸ್. ಅರುಣ್, ಎಸ್. ದತ್ತಾತ್ರಿ ಹಾಗೂ ಸೂಡಾ ಅಧ್ಯಕ್ಷ ನಾಗರಾಜ್, ನಗರ ಅಧ್ಯಕ್ಷ ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಪದ್ಮಿನಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷಕ್ಷೆ ಸುರೇಖ ಮುರಳಿಧರ್, ಪ್ರಧಾನ ಕಾರ್ಯದರ್ಶಿ ಆರತಿ ಪ್ರಕಾಶ್, ರಶ್ಮಿ ಶ್ರೀನಿವಾಸ್, ಮಾಜಿ ಮಹಾಪೌರರಾದ ಸುವರ್ಣ ಶಂಕರ್, ಪಾಲಿಕೆ ಸದಸ್ಯರುಗಳಾದ ವಿಶ್ವಾಸ್, ವಿಶ್ವನಾಥ್, ಲಕ್ಷ್ಮಿ ಶಂಕರ್ ನಾಯಕ್, ಅನಿತಾ ರವಿಶಂಕರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post