ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರನೌಕರರ ಸೇವಾಭಿವೃದ್ಧಿ ಸಂಘದಿಂದ ಅ.11ರಂದು ಬೆಳಿಗ್ಗೆ 9.15ರಿಂದ ಮಧ್ಯಾಹ್ನದವರೆಗೆ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ, ಸಂಘದ ಹಿರಿಯ ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, 4 ಸಮಾವೇಶಗಳು ಸೇರಿದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ನೆರವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಕಾರ, ರಾಜಕೀಯ ಸಾಹಿತ್ಯದಲ್ಲಿ ಹೆಸರು ಮಾಡಿದವರಿಗೆ ಸನ್ಮಾನ, ವಧುವರರ ವೈವಾಹಿಕದ ಬಗ್ಗೆ ಮಾಹಿತಿ ಹೀಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದೆ ಎಂದರು.

Also read: ಎಸ್. ನಿಜಲಿಂಗಪ್ಪ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಕಗ್ಗ ಖ್ಯಾತಿಯ ನಿವೃತ್ತ ಉಪನ್ಯಾಸಕ ಜಿ.ನಟೇಶ್ ದಿಕ್ಸೂಚಿ ನುಡಿಗಳನ್ನಾಡುವರು, ಕಾರ್ಯಕ್ರಮದಲ್ಲಿ 50 ವರ್ಷ ದಾಂಪತ್ಯ ಬದುಕನ್ನು ಪೂರೈಸಿದ ಸಾವಿತ್ರಿ ವಿ.ಎಸ್. ಚಂದ್ರಶೇಖರ್‍ಭಟ್, ಹೇಮ ನಳಿನಿ ಜಿ.ವಿ.ಕೃಷ್ಣಮೂರ್ತಿ, ವಸಂತಲಕ್ಷ್ಮೀ ಎಸ್.ಆರ್.ಗೋಪಾಲ್, ಪದ್ಮಾ ಸಿ.ಎನ್.ಕೇಶವಮೂರ್ತಿ, ಗಾಯಿತ್ರಿ ವೆಂಕಟರಾಜು, ಇಂದಿರಾ ಎಂ.ಎನ್. ಸುಂದರರಾಜು, ಸುಲೋಚನಾ ಶ್ರೀನಿವಾಸಮೂರ್ತಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷ ಆರ್. ಅಚ್ಯುತ್‍ರಾವ್, ಖಜಾಂಚಿ ಯು.ಎಸ್.ಕೇಶವಮೂರ್ತಿ, ವಸುಂದರ ವಿ., ಎಸ್.ನಾಗೇಶ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post