ಶಿವಮೊಗ್ಗ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದ ನಂತರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಆಗುತ್ತಿಲ್ಲ ಎಂಬ ಆರೋಪದ ನಡುವೆಯೇ, ನಗರದ ಹಲವು ಭಾಗಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳು ತಾಂಡವವಾಡುತ್ತಿವೆ.
ವಿನೋಬ ನಗರದ ಪೋಲೀಸ್ ಚೌಕಿಯಿಂದ ಜೆ.ಎಚ್. ಪಟೇಲ್ ಬಡಾವಣೆಗೆ ಹೋಗುವ ರಸ್ತೆ ಮೈತ್ರಿ ಹಾಸ್ಟೆಲ್ ಎದುರು ಹಾಗೂ ರೈಲ್ವೆ ಹಳಿ ದಾಟಿದ ನಂತರ ಎಡಭಾಗದಲ್ಲಿ ಕಸಗಳನ್ನು ಡಬ್ರೀಸ್ ಹಳೆ ಮನೆಯ ಇಟ್ಟಿಗೆ ಚೂರುಗಳನ್ನು ರಸ್ತೆಯ ಪಕ್ಕದಲ್ಲಿ ಸುರಿದು ಹೋಗುತ್ತಿದ್ದಾರೆ.
ಸ್ಥಳೀಯ ಹಾಗೂ ವಿವಿಧ ಬಡಾವಣೆಗಳ ಹಳೆಯ ಕಟ್ಟಡಗಳನ್ನು ಕೆಡವಿದ ನಂತರ ಅದರ ವೇಸ್ಟನ್ನು ಈ ಭಾಗದಲ್ಲಿ ನಿರಂತರವಾಗಿ ಸುರಿದು ಹೋಗುತ್ತಿದ್ದಾರೆ. ಇದು ಇಲ್ಲಿನ ಸಮಸ್ಯೆಯನ್ನು ಹೆಚ್ಚು ಮಾಡುವ ಜೊತೆಯಲ್ಲಿ ಅಸ್ವಚ್ಛತೆ ಕಾರಣವಾಗುತ್ತಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆಯಲ್ಲಿ ಮಾತನಾಡಿದ ಸ್ಥಳೀಯರು, ಈ ಪ್ರದೇಶದಲ್ಲಿ ರಾತ್ರೋರಾತ್ರಿ ಇಂತಹ ವೇಸ್ಟನ್ನು ಸುರಿದು ಹೋಗುತ್ತಿದ್ದಾರೆ. ಇದು ಇಲ್ಲಿನ ಅಸ್ವಚ್ಛತೆಗೆ ಕಾರಣವಾಗುತ್ತಿರುವ ಜೊತೆಯಲ್ಲಿ ರಸ್ತೆ ಸಂಚಾರಕ್ಕೂ ಸಹ ತೊಂದರೆ ಉಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ನಗರ ಪ್ರದೇಶದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಈ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ. ಈ ರೀತಿ ಸುರಿದುಹೋಗುತ್ತಿರುವ ಟ್ರಾಕ್ಟರ್ ಮಾಲೀಕರ ಮೇಲೆ ಹಾಗೂ ಇದಕ್ಕೆ ಸಹಕಾರ ನೀಡುತ್ತಿರುವ ಕಟ್ಟಡ ಮಾಲೀಕರ ವಿರುದ್ಧವೂ ಸಹ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರಾದ ಮಂಜುನಾಥ ರಾವ್, ಬಸವಮೂರ್ತಿ, ಕಮಲಮ್ಮ, ನಿರಂಜನ್, ರಾಕೇಶ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post