ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆ ಈಡೇರಿಕೆ ಸನ್ನಿಹಿತವಾಗಿದ್ದು, ಎಫ್’ಎಂ Shivamogga FM ಪ್ರಸರಣ ಕೇಂದ್ರಕ್ಕೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರು ಮಾಹಿತಿ ನೀಡಿದ್ದು, ಇಂದು ಸಂಜೆ 6 ಗಂಟೆಗೆಎ ನಗರದ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಕೇಂದ್ರದಲ್ಲಿ 10 ಕೆವಿ ಎಫ್’ಎಂಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದಿದ್ದಾರೆ.
ಭದ್ರಾವತಿ ಆಕಾಶವಾಣಿ ಇದೇ ಫೆಬ್ರವರಿಗೆ 60ನೆಯ ವರ್ಷಕ್ಕೆ ಕಾಲಿಡಲಿದೆ. ಸಾಮಾನ್ಯವಾಗಿ 60 ಎಂದರೆ ನಿವೃತ್ತಿ ಎನ್ನುತ್ತಾರೆ. ಆದರೆ, ಈ ಸಂದರ್ಭದಲ್ಲಿ ಆಕಾಶವಾಣಿ ಭದ್ರಾವತಿಗೆ ಹೊಸ ಹರೆಯ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Also read: ತೀರ್ಥಹಳ್ಳಿ: ಬಾಳೆಬೈಲ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
ಬದಲಾಗುತ್ತಿರುವ ಈ ಯುಗದಲ್ಲಿ ಮೊಬೈಲ್, ಇಂಟರ್’ನೆಟ್ ಹಾಗೂ ಕಂಪ್ಯೂಟರ್ ಬಳಕೆ ಹೆಚ್ಚುತ್ತಿದ್ದು, ನಾವೆಲ್ಲಾ ಹಿಂದೆ ಬಳಸುತ್ತಿದ್ದ ರೇಡಿಯೋ ಬಹಳ ಕಡಿಮೆಯಾಗಿದೆ. ಆದರೆ, ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಧ್ಯೇಯವಾಕ್ಯ ಹೊಂದಿದ ಕೇಂದ್ರ ಸರ್ಕಾರದ ಪ್ರಸಾರಭಾರತಿಯ ಆಕಾಶವಾಣಿ ಇಂದಿಗೂ ತನ್ನ ವಿಶ್ವಾಸಾರ್ಹ ಸುದ್ದಿ, ಮನರಂಜನೆ ಹಾಗೂ ಶಿಕ್ಷಣ ಪ್ರಸಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಎಫ್’ಎಂ ಬೇಡಿಕೆಗೆ ಸ್ಪಂದಿಸಿ ಇದರ ಸ್ಥಾಪನೆಗೆ ಅನುವು ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರುಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post