ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆದು ತಂದು 75 ಕೋಟಿ ರೂ. ವೆಚ್ಚದಲ್ಲಿ ಸಿದ್ಧರಾಮೋತ್ಸವ ಆಚರಿಸಲಾಯಿತು. ಆದರೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ PM Narendra Modi ಕಾರ್ಯಕ್ರಮಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಸಾರ್ವಜನಿಕರ ಒಲವು ಬಿಜೆಪಿ ಕಡೆಗಿದೆ ಎಂಬುದು ಇದರಿಂದಲೇ ಸಾಬೀತಾದಂತಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಲಕ್ಷಾಂತರ ಜನರ ಉಪಸ್ಥಿತಿಯಲ್ಲಿ ಸಿದ್ಧರಾಮೋತ್ಸವದಂತಹ ಹಲವು ಬಿಜೆಪಿ ಸಮಾವೇಶಗಳನ್ನು ನಡೆಸಲಾಗುವುದು ಎಂದರು.

Also read: ಮುಂಬರುವ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ
ಸಾಧು-ಸಂತರೆ ಹಿಂದೂ ಧರ್ಮಕ್ಕೆ ಪ್ರೇರಣೆ, ಮುರುಘಾ ಶ್ರೀಗಳ ಮೇಲೆ ಕೇಳಿ ಬಂದಿರುವ ಆರೋಪ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ. ಮುರುಘಾ ಶ್ರೀಗಳ ಬಗ್ಗೆಯು ತಮಗೆ ಅಪಾರ ಗೌರವವಿದೆ. ತನಿಖೆಯಲ್ಲಿ ಅದು ಸತ್ಯವೋ ಸುಳ್ಳೋ ಎಂಬುದು ಗೊತ್ತಾಗಲಿದೆ. ಈಗಲೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದರು.

ಸಾರ್ವಜನಿಕರ ಅಪೇಕ್ಷೆಯಂತೆ ಪ್ರಸ್ತುತ ಶಿವಮೊಗ್ಗ ಶಾಂತವಾಗಿದೆ. ಗಲಭೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಅವರೆಲ್ಲ ಜೈಲಿನಲ್ಲಿದ್ದಾರೆ. ಅವರೆಲ್ಲ ಈಗ ಬಾಲ ಮುದುಡಿಕೊಂಡಿದ್ದಾರೆ. ಮತ್ತೆ ಬಾಲ ಬಿಚ್ಚಿದರೆ ಏನು ಮಾಡಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದರು.
ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರಿಗೆ ಹುಷಾರ್ ಎಂಬ ಎಚ್ಚರಿಕೆ ಕೊಟ್ಟಿದ್ದೇವೆ. ಅವರನ್ನೆಲ್ಲಾ ಎಲ್ಲಿಡಬೇಕೋ ಅಲ್ಲಿಟ್ಟಿದ್ದೇವೆ. ಮತ್ತೆ ತಲೆಹರಟೆ ಮಾಡಿದರೆ ಎಲ್ಲಿಡಬೇಕೋ ಅಲ್ಲಿಡುತ್ತೇವೆ ಎಂದು ಶಾಸಕ ಈಶ್ವರಪ್ಪ ಹೇಳಿದರು.










Discussion about this post