ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಜುಲೈ 1ರ ನಾಳೆಯಿಂದ ಮತ್ತೆ ಆರಂಭವಾಗಲಿದೆ.
ಈ ಕುರಿತಂತೆ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದ್ದು, ಅಂತರ್ ಜಿಲ್ಲಾ ಸಂಚಾರ ಮತ್ತು ನಗರ ಸಾರಿಗೆ ಎರಡೂ ಆರಂಭವಾಗಲಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಬಸ್ ಗಳನ್ನು ಓಡಿಸಲಾಗುವುದಿಲ್ಲ. ಮೊದಲ ದಿನ ಅಂತರ್ ಜಿಲ್ಲಾ ಸಾರಿಗೆಯ ಶೇ.30 ಹಾಗೂ ನಗರ ಸಾರಿಗೆ ಶೇ.20-25ರಷ್ಟು ಬಸ್ ಗಳನ್ನು ಓಡಿಸಲಾಗುವುದು ಎಂದು ತಿಳಿಸಿದೆ.
ಸದ್ಯ, ಶಿವಮೊಗ್ಗದಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಗೆ ಸಂಚರಿಸುವ 600 ಬಸ್’ಗಳಿವೆ. ಎಲ್ಲವನ್ನೂ ಏಕ ಕಾಲಕ್ಕೆ ಆರಂಭಿಸದೇ, ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿದ ಬಳಿಕವಷ್ಟೇ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post