ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆವಿಷ್ಕಾರವೆಂಬುದು ಯಾವುದೇ ರೀತಿಯಲ್ಲೂ ವಯಸ್ಸಿಗಾಗಲಿ, ಅನುಭವಕ್ಕಾಗಲಿ ಎಳ್ಳಷ್ಟು ಸಂಬಂಧವನ್ನು ಪಡೆದಿಲ್ಲ. ನಾವೀನ್ಯತೆಯನ್ನು ಸೃಷ್ಟಿಸುವಲ್ಲಿ ಆಂತರಿಕ ಮಟ್ಟದಲ್ಲಿ ಹೊಸತನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮನೋವಾಂಚೆಯನ್ನು ಜಾಗೃತಗೊಳಿಸುವಲ್ಲಿ ಈ ರೀತಿಯ ಪ್ರಾಜೆಕ್ಟ ಪ್ರದರ್ಶನ ಮೇಳಗಳು ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದು ಪಿ ಇ ಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ್ ಆರ್ ನುಡಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಪಿಇಎಸ್ಐಟಿಎಂನ ಅಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಇನ್ನೋವೇಶನ್ ಅಂಡ್ ಡಿಸೈನ್ ಥಿಂಕಿಂಗ್” ವಿಷಯದ ಕುರಿತಾಗಿ ಒಂದು ದಿನದ ಪ್ರಾಜೆಕ್ಟ್ ಮತ್ತು ಪೋಸ್ಟರ್ ಎಕ್ಸಿಬಿಷನ್ ಪ್ರದರ್ಶನ ಮೇಳದಲ್ಲಿ ವಿದ್ಯಾರ್ಥಿ ವೃಂದವನ್ನು ಉದ್ದೇಶಿಸಿ ಮಾತನಾಡಿದರು.
ಈ ಪ್ರದರ್ಶನ ಮೇಳದಲ್ಲಿ ಪಿಇಎಸ್ಐಟಿಎಂನ ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್ ಉಪಸ್ಥಿತರಿದ್ದ ವಿದ್ಯಾರ್ಥಿ ವೃಂದವನ್ನು ಉದ್ದೇಶಿಸಿ ತಾವು ತಯಾರಿಸಿದ ಪ್ರಾಜೆಕ್ಟ್ ಗಳ ಆಮೂಲ ಅಗ್ರ ಮಾಹಿತಿಯನ್ನು ಸಮಗ್ರವಾಗಿ ಅಭ್ಯಾಸಿಸಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯನ್ನು ತಾರ್ಕಿಕ ಹಾಗೂ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮವಾದ ಪರಿಕರಗಳನ್ನು ಆವಿಷ್ಕರಿಸುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚ್ಯವಾಗಿ ನುಡಿದರು.
ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಪಿಇಎಸ್ಐಟಿಎಂನ ಮುಖ್ಯ ಸಂಯೋಜಕರಾದ ಡಾ. ಓಂ ಪ್ರಕಾಶ್ ಯಾದವ್, ಮುಖ್ಯಸ್ಥರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ; ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಪಿಇಎಸ್ಐಟಿಎಂನ ಸದಸ್ಯರಾದ ಡಾ. ಪ್ರವೀಣ್ ಕುಮಾರ್ ಸಿ ಎಂ ಪ್ರದರ್ಶನ ಮೇಳವು ಯಶಸ್ವಿಯಾಗಿ ಜರುಗುವಲ್ಲಿ ಅನಹವರಿತ ಶ್ರಮಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ 300ಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post