ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಹಾಗೂ ಕರಾವಳಿ ಪ್ರದೇಶವನ್ನು ರೈಲ್ವೆ #Malenadu-Coastal Railway ಮೂಲಕ ಸಂಪರ್ಕಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಪ್ರಯತ್ನಗಳು ನಡೆದಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಶಿವಮೊಗ್ಗ-ಮಂಗಳೂರು ಸಂಪರ್ಕಿಸಲು ಪ್ರಯತ್ನಗಳು ನಡೆದಿದ್ದು, ಕಡೂರು ಮೂಲಕ ಚಿಕ್ಕಮಗಳೂರು, ಅಲ್ಲಿಂದ ಸಕಲೇಶಪುರ ಮೂಲಕ ಮಂಗಳೂರು ತಲುಪುವ ಯೋಜನೆಗೆ ಪ್ರಯತ್ನ ನಡೆಯುತ್ತಿದೆ ಎಂದರು.
Also read: ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಂಸದರಿಂದ ಮತ್ತೊಂದು ಗುಡ್ ನ್ಯೂಸ್ | ಏನಿದು?

ಶಿವಮೊಗ್ಗದಿಂದ ರಾಣೆಬೆನ್ನೂರಿಗೆ ಮಾರ್ಗ ನಿರ್ಮಾಣ ಆದರೆ ಹಲವು ಭಾಗಗಳ ರೈಲು ನಗರದ ಮೂಲಕ ಸಂಚರಿಸಲಿವೆ. ಇದರ ಕುರಿತಾಗಿ ಇರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post