ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಿಂದ ಶಬರಿಮಲೈಗೆ ತೆರಳಿದ್ದ ಅಯ್ಯಪ್ಪ #Ayyappa ಮಾಲಾಧಾರಿಗಳ ಮೇಲೆ ಕೇರಳ ಪೊಲೀಸರು ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯಿಂದ ಇಂದು ಶಿವಪ್ಪನಾಯಕ ವೃತ್ತದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ #Kelrala CM Pinarayee Vijayan ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕೇರಳದ ಪ್ರಖ್ಯಾತ ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಪ್ರತಿವರ್ಷ ಕರ್ನಾಟಕದಿಂದ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ತೆರೆಳುತ್ತಿದ್ದು, ಹಲವು ದಿನಗಳ ಕಠಿಣವ್ರತ ಮಾಡಿ, ಅಯ್ಯಪ್ಪ ದರ್ಶನಕ್ಕೆ ತೆರಳುವುದು ವಾಡಿಕೆ. ಆದರೆ ಈ ಬಾರಿ ಕರ್ನಾಟಕದ ಭಕ್ತರಿಗೆ ಕೇರಳ ಸರ್ಕಾರ ಲಾಠಿರುಚಿ ತೋರಿಸಿದೆ. ತಮಿಳುನಾಡು ಮತ್ತು ಆಂಧ್ರದಿಂದ ಬರುವ ಅಯ್ಯಪ್ಪ ಭಕ್ತರ ವಾಹನಗಳನ್ನು ಸನ್ನಿಧಾನದ ಹೊರಗೆ ಬಿಡುತ್ತಿದ್ದು, ಕರ್ನಾಟಕದ ಭಕ್ತರ ವಾಹನಗಳನ್ನು 50 ಕಿ.ಮೀ.ದೂರದಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ತೆರಳಲು ಸೂಚಿಸುತ್ತಿದ್ದು ಕೆಲವರಿಗೆ ಕಡ್ಡಾಯವಾಗಿ ಕೇರಳದ ಸಾರಿಗೆ ನಿಗಮದ ವಾಹನಗಳನ್ನು ಬಳಸುವಂತೆ ತಾಕೀತು ಮಾಡುತ್ತಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳು ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ, ಬೇರೆ ರಾಜ್ಯಗಳ ವಾಹನಕ್ಕೆ ಅವಕಾಶಕೊಟ್ಟು ಕರ್ನಾಟಕದ ವಾಹನಗಳನ್ನು ತಡೆದು ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ. ಆಗ ಕೇರಳ ಪೊಲೀಸರು ಯಾವುದೇ ಮುನ್ಸೂಚನೆ ನೀಡಿದೆ ಲಾಠಿರುಚಿ ತೋರಿಸಿದ್ದಾರೆ. ಆನ್‌ಲೈನ್‌ನಲ್ಲಿ ವಾಹನಗಳ ನೋಂದಣಿ ಮಾಡಿದರೆ ಮಾತ್ರ ನಿಮಗೆ ಪ್ರವೇಶ ಎಂದು ಹೇಳುತ್ತಿದ್ದು, ಈಬಗ್ಗೆ ನಮಗೆ ಮುಂಚಿತವಾಗಿ ಮಾಹಿತಿ ಇಲ್ಲ. ಪ್ರತಿವರ್ಷದಂತೆ ನಾವು ಹಲವಾರು ವರ್ಷಗಳಿಂದ ಸನ್ನಿಧಿಗೆ ತೆರಳುತ್ತಿದ್ದು, ಈ ಬಾರಿ ಸರ್ಕಾರ ಹೊಸ ಕಾನೂನುಮಾಡಿ ಮುನ್ಸೂಚನೆ ನೀಡದೆ ಅಮಾಯಕ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆಮಾಡಿದೆ. ಇದನ್ನು ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಖಂಡಿಸುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕೇರಳ ಸರ್ಕಾರಕ್ಕೆ ಅರಿವು ಮೂಡಿಸಬೇಕು ಎಂದು ಕರ್ನಾಟಕ ಕಾರ್ಮಿಕ ವೇದಿಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ವಾಟಾಳ್ ಮಂಜುನಾಥ್, ಕಾರ್ಯದರ್ಶಿ ಪ್ರವೀಣ್, ಮಾರುತಿ, ಸತೀಶ್, ಲೋಕೇಶ್ ಗೌಡ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















