ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಚುನಾವಣೆಯಲ್ಲಿ ನಾನು ಗೆದ್ದ ನಂತರ ರಾಘವೇಂದ್ರ ಸೋಲುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಹಾಗೂ ಪಕ್ಷ ಶುದ್ಧೀಕರಣವಾಗುತ್ತದೆ ಎಂದು ಮಾಜಿ ಡಿಸಿಎಂ, ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಯಡಿಯೂರಪ್ಪ #Yadiyurappa ಕುಟುಂಬಕ್ಕೆ ತಿರುಗೇಟು ನೀಡಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೆದ್ದ ನಂತರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೋರಾಗಾರರನ್ನು ಕರೆಸಿಕೊಂಡು ಕರೆಸಿ ಶರಾವತಿ ಸಂತ್ರಸ್ಥ, ವಿಐಎಸ್’ಎಲ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಧಿಕಾರಿ ಮಂತ್ರಿಗಳನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆ ಹರಿಸುವಲ್ಲಿ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ನಾನು ಗೆದ್ದ ನಂತರ ರಾಘವೇಂದ್ರ ಸೋಲುತ್ತಾರೆ, ರಾಜ್ಯಾಧ್ಯಕ್ಷ ಬದಲಾಗುತ್ತಾರೆ, ಪಕ್ಷ ಶುದ್ಧೀಕರಣವಾಗುತ್ತದೆ ಎಂದರು.
ಈಶ್ವರಪ್ಪ ಗೆದ್ದ ನಂತರ ಅಭಿವೃದ್ಧಿ ಮಾಡುತ್ತಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಘವೇಂದ್ರ, #Raghavendra ಮೋದಿ #Modi ಕೊಟ್ಟದ್ದನ್ನು ತಂದಿದ್ದಾರೆ ನಾನು ಸಹ ಗೆದ್ದ ನಂತರ ಮೋದಿ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆ. ಹಿಂದೆ ಎಷ್ಟು ಜನ ಪ್ರಧಾನಿಗಳು ಇದ್ದರು ಆಗ ಸಂಸದರು ಇರಲಿಲ್ವ ಅಭಿವೃದ್ಧಿ ಮಾಡಲು ಹಿಂದೆ ಇದ್ದ ಪ್ರಧಾನಿಗಳು ಯೋಚನೆ ಮಾಡಲಿಲ್ಲ. ಮಗನಿಗಾಗಿ ಯಡಿಯೂರಪ್ಪ ಸಿ.ಟಿ. ರವಿ ಸೇರಿದಂತೆ ಅನೇಕ ಹಿಂದುತ್ವ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಕಿಡಿ ಕಾರಿದರು.
Also read: ನನ್ನ ಬಗ್ಗೆ ಭಯ ಆರಂಭವಾಗಿ ಬಹಳ ದಿನ ಆಗಿದೆ | ವಿರೋಧಿಗಳಿಗೆ ಈಶ್ವರಪ್ಪ ಟಾಂಗ್
ಹಿಂದುತ್ವ ಉಳಿಸುವುದು, ಪಕ್ಷ ಶುದ್ಧೀಕರಣ ಮಾಡಿ ಪಕ್ಷ ಉಳಿಸೋದು, ಗೆದ್ದ ನಂತರ ಮೋದಿ ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ಧಿ ಮಾಡುವುದು ನನ್ನ ಚುನಾವಣ ಪ್ರಣಾಳಿಕೆ. ಸಿದ್ಧಾಂತ ಪರ ಹೋರಾಟ ಮಾಡುತ್ತಿದ್ದೇನೆ ಇದು ದೇಶದಾದ್ಯಂತ ಚರ್ಚೆಯಲ್ಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post