ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜಕಾರಣ ಬಿಟ್ಟು ಬಡವರ ಉದ್ಧಾರ ಮಾಡಿ ಎಂದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ KSEshwarappa ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ CM Siddaramaiah ಕಿವಿ ಮಾತು ಹೇಳಿದರು.
ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ರಾಜಕಾರಣ ಬಿಟ್ಟು ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರ ಸ್ನೇಹಿತನಾಗಿ, ಸಹೋದರನಾಗಿ ಹೇಳುತ್ತಿದ್ದೇನೆ. ಸಾಕು ಈ ರಾಜಕಾರಣ ಇನ್ನು 4.5ವರ್ಷ ನೀವೇ ಮುಖ್ಯಮಂತ್ರಿಗಳಾಗಿ ಆದರೆ, ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಕುಂಠಿತವಾಗಿ ಹಿಂದುಳಿದ ವರ್ಗಗಳು ಸೇರಿದಂತೆ ದಲಿತರ, ಬಡವರ, ಕಷ್ಟಗಳು ಹೆಚ್ಚಾಗಿವೆ, ಅವರ ಕಲ್ಯಾಣವಾಗುತ್ತಿಲ್ಲ. ರಾಜ್ಯದ ಅಭಿವೃದ್ಧಿಯೇ ಇಲ್ಲವಾಗಿದೆ. ಇನ್ನಾದರೂ ಬಡವರ ಪರ ಧ್ವನಿ ಎತ್ತಿ ಸರ್ಕಾರದ ಯೋಜನೆಗಳನ್ನು ಸಕಾರಗೊಳಿಸಿ ಎಂದರು.
ಬಡವರ ಉದ್ದಾರಕ್ಕಾಗಿಯೇ ಕಾಂಗ್ರೆಸ್ ಇದೆ ಎನ್ನುವವರು ನೀವು, ದೇವರಾಜು ಅರಸುರವರ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿದ್ದೀರಿ, ಕಳೆದ 20 ತಿಂಗಳಿನಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಿಮ ಸಚಿವರುಗಳು ಜವಾಬ್ದಾರಿಯನ್ನೇ ಮರೆಯುತ್ತಿದ್ದಾರೆ. ಒಂದು ಕಡೆ ಗ್ಯಾರಂಟಿಗಳು ಕೂಡ ಜನರನ್ನು ತಲುಪುತ್ತಿಲ್ಲ. ಶಿವಮೊಗ್ಗ ಸೇರಿದಂತ್ತೆ ಇಡೀ ರಾಜ್ಯದಲ್ಲಿ ಒಂದೇ ಒಂದು ವಸತಿ ನಿರ್ಮಾಣವಾಗಿಲ್ಲ. ಶಿವಮೊಗ್ಗದಲ್ಲಿ ಸುಮಾರು 4,800 ಮನೆಗಳು ನಿರ್ಮಾಣಕ್ಕಾಗಿ ಕಾಯುತ್ತಿವೆ. ಅವರು ಎಲ್ಲಿ ಹೋಗಬೇಕು.
ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದ್ದು, ಮೂರು ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ನಾವೇಕೆ ಕಾಂಗ್ರೆಸ್ ಜೊತೆ ಹೋಗಬೇಕು ಎಂದು ಮತದಾರರು ಮಾಡಿದ ತೀರ್ಮಾನ 3 ರಾಜ್ಯಗಳಲ್ಲಿನ ಫಲಿತಾಂಶ ಸಾಕ್ಷಿ ಎಂದರು.
ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡ ವಿಧಾನಸಭಾ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ತನ್ನ ಸಾಧನೆಗಿಂತ ಗ್ಯಾರಂಟಿಯ ಮೋಸದ ಭರವಸೆ ನೀಡ್ತಿದ್ದಾರೆ. ತೆಲಂಗಾಣದ ಶಾಸಕರಿಗೆ ಇದು ಅರ್ಥವಾಗಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕರನ್ನು ಕಟ್ಟು ಹಾಕಬೇಕು ಅಂತಾ ಪ್ರಯತ್ನ ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಲ್ಲ ಎಂದರು.
Also read: India will soon be completely free from left-wing extremism: Union Home Minister Amit Shah
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಅಂತ ದೇಶದ ಜನ ನಮ್ಮ ಜೊತೆ ಇದ್ದಾರೆ. ಈ ಫಲಿತಾಂಶದಿಂದ ಇಡಿ ದೇಶದ ಜನಕ್ಕೆ ಆನಂದ ಆಗಿದೆ. ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್ಗಡ್ ಉಡುಗೊರೆ ಆಗಿ ನೀಡಿದ್ದಾರೆ. ಛತ್ತೀಸ್ಗಢ ಗೆಲ್ತೇವಂತ ಅಂತ ನಾವು ಅಂದುಕೊಂಡಿರಲಿಲ್ಲ. ಆದರೆ ಮತದಾರರು ನಮ್ಮ ಕೈ ಹಿಡಿದಿದ್ದಾರೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲುತ್ತಿದೆ. ಗ್ಯಾರಂಟಿ ಮೋಸಗಳ ಮೂಲಕ ತೆಲಂಗಾಣದಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿದರು.
ತೆಲಂಗಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕರ್ನಾಟಕದ ಜಮೀರ್, ಜಾರ್ಜ್, ಡಿಕೆ ಶಿವಕುಮಾರ್‍ರವರು ಕಾರಣರಾಗಿದ್ದಾರೆ. ಜಮೀರ್ ಅವರು ಮುಸ್ಲಿಂ ವೋಟುಗಳ ಮೇಲೆ ಪ್ರಭಾವ ಬೀರಿದ್ದಾರೆ. ಇದು ಮುಂದೆ ನಡೆಯುವುದಿಲ್ಲ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿತ್ತು. ಈಗ 8 ಸ್ಥಾನಗಳನ್ನು ಪಡೆದಿದ್ದೇವೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಸೋಲಿಸಿದ್ದು, ಬಿಜೆಪಿಯ ಸಾಧನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಗಿರೀಶ್ ಪಟೇಲ್, ದತ್ತಾತ್ರಿ, ಕೆ.ವಿ. ಅಣ್ಣಪ್ಪ, ಸುದೀಂದ್ರ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post