ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಧಾರ್ಮಿಕ ಪರಿಷತ್ತನ್ನು ರಾಜ್ಯ ಸರ್ಕಾರ ರಚನೆ ಮಾಡಿದ್ದು, ಇದರ ಸದಸ್ಯರನ್ನಾಗಿ ಭದ್ರಾವತಿಯ ಜಿ. ರಮಾಕಾಂತ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 21 ಮತ್ತು ತಿದ್ದುಪಡಿ ಅಧಿನಿಯಮದನ್ವಯ 9 ಸದಸ್ಯರನ್ನು ಒಳಗೊಂಡ ಶಿವಮೊಗ್ಗ ಜಿಲ್ಲಾ ಧಾರ್ಮಿಕ ಪರಿಷತ್ ರಚನೆಯಾಗಿದ್ದು, ಹಳೇನಗರದ ನಿವಾಸಿ ಜಿ. ರಮಾಕಾಂತ್ ಅವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ರಮಾಕಾಂತ್ ಅವರು ತಾಲೂಕು ಬ್ರಾಹ್ಮಣ ಸಮಾಜ ಮಾಜಿ ಅಧ್ಯಕ್ಷರೂ ಆಗಿದ್ದು, ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಗುರುರಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ನಗರ ನಡೆಯುವ ದಸರಾ ಆಚರಣೆ, ವಿವಿಧ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
Also read: ಅತ್ಯುತ್ತಮ ಸಂಸದೀಯ ಪಟು, ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ವಿಧಿವಶ
ಈ ಕುರಿತಂತೆ ಮಾತನಾಡಿದ ರಮಾಕಾಂತ್ ಅವರು, ಈ ಪರಿಷತ್’ನಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಕಾರಣಕರ್ತರಾಗಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ನೂತನ ಜಿಲ್ಲಾ ಧಾರ್ಮಿಕ ಪರಿಷತ್’ಗೆ ಯಾರೆಲ್ಲಾ ನೇಮಕ?
- ಸಿ. ಸೆಲ್ವಕುಮಾರ್, ನಿವೃತ್ತ ನ್ಯಾಯಾಧೀಶರು: ನ್ಯಾಯಿಕ ಸದಸ್ಯರು
- ಜೆ.ಎಸ್. ನಾಗಭೂಷಣ, ದೂರ್ವಾಸಪುರ, ತೀರ್ಥಹಳ್ಳಿ: ಆಗಮ ವಿದ್ವಾಂಸರು
- ವಿ.ಗೀತಾದಾತರ್, ವಿನಾಯಕ ನಗರ, ಶಿವಮೊಗ್ಗ: ವೇದ ವಿದ್ವಾಂಸರು
- ಎಂ. ಶಿವಲಿಂಗಪ್ಪ, ಮಾರಶೆಟ್ಟಿಹಳ್ಳಿ, ಭದ್ರಾವತಿ: ಪರಿಶಿಷ್ಟ ಜಾತಿ
- ವರಲಕ್ಷ್ಮಿ, ಅಗ್ರಹಾರ ಕುರುವಳ್ಳಿ, ತೀರ್ಥಹಳ್ಳಿ: ಮಹಿಳೆ
- ಎನ್. ಉಮಾಪತಿ, ದುರ್ಗಿಗುಡಿ, ಶಿವಮೊಗ್ಗ: ಹಿಂದುಗಳಿದ ವರ್ಗ
- ಎನ್.ಡಿ. ಪ್ರವೀಣ್ ಕುಮಾರ್, ಸೋಮಯ್ಯ ಲೇಔಟ್, ಶಿವಮೊಗ್ಗ: ಸಾಮಾನ್ಯ
- ಜಿ. ರಮಾಕಾಂತ, ಹಳೇನಗರ, ಭದ್ರಾವತಿ: ಸಾಮಾನ್ಯ
- ದಿನೇಶ್, ಟೀಚರ್ಸ್ ಕಾಲೋನಿ, ಸಾಗರ: ಸಾಮಾನ್ಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post