ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಶ್ರೀ ಸರ್ವಸಿದ್ದಿ ವಿನಾಯಕ ಸ್ವಾಮಿ #Ramanna Shresti Park Ganapathi ಸೇವಾ ಸಮಿತಿ ವತಿಯಿಂದ ಶ್ರೀ ಸರ್ವಸಿದ್ದಿ ವಿನಾಯಕ ಸ್ವಾಮಿ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 53ನೇ ವಾರ್ಷಿಕೋತ್ಸವ ಮತ್ತು 108 ಕುಂಭ ಕಲಶಾಭಿಷೇಕವನ್ನು ಜ.31ರಂದು ಹಮ್ಮಿಕೊಳ್ಳಲಾಗಿದೆ.
ಜ.30ರ ಸಂಜೆ 6.30ರಿಂದ ಶ್ರೀ ವಿನಾಯಕ ಪ್ರಾರ್ಥನೆ, ಕಳಸ ಪ್ರತಿಷ್ಠಾಪನಾ ಹೋಮ ಜರುಗಲಿದೆ.
ಜ.31ರ ಬೆಳಿಗ್ಗೆ 8.30ರಿಂದ ಮೋದಕ ಹವನ ಆರಂಭವಾಗಲಿದೆ. 10.30ಕ್ಕೆ ಪೂರ್ಣಾಹುತಿ ನಂತರ ಮಧ್ಯಾಹ್ನ 1ಗಂಟೆಗೆಯವರೆಗೆ ಕುಂಭಾಬಿಷೇಕ ನಡೆಯಲಿದೆ. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ಇರುತ್ತದೆ.
ಕುಂಭಾಬಿಷೇಕದಲ್ಲಿ ಭಾಗವಹಿಸುವ ಭಕ್ತಾದಿಗಳು 200 ರೂ. ಸೇವಾ ಕಾಣಿಕೆ ಪಾವತಿಸಬೇಕಾಗಿದೆ. ಪ್ರಸಾದಕ್ಕೆ ದಿನಸಿ, ಹಾಲು ಮತ್ತು ಮೊಸರು ಇತರೆ ಸಾಮಾಗ್ರಿಗಳನ್ನು ನೀಡ ಬಯಸುವ ಹಾಗೂ ಸ್ವಾಮಿಗೆ ಬೆಳ್ಳಿ ಪ್ರಭಾವಳಿ ಮಾಡಿಸಲು ಬೆಳ್ಳಿ ಅಥವಾ ನಗದನ್ನು ಭಕ್ತಾಧಿಗಳು, ಕೌಂಟರ್‌ನಲ್ಲಿ ಅಥವಾ ಅಫೀಸ್‌ನಲ್ಲಿ ನೀಡಿ ರಶೀದಿ ಪಡೆಯಬೇಕು ಎಂದು ಸಮಿತಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















