ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರುಗಳ ನೇಮಕಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಅಸಕ್ತವಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಗೀತ/ಧ್ವನಿ-ಬೆಳಕು/ರಂಗಸಜ್ಜಿಕೆ/ಪರಿಕರ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರುವ, ಕನ್ನಡ ಭಾಷೆ ಓದುವ, ಬರೆಯುವ ಮತ್ತು ಮಾತಾನಾಡುವ ಸಾಮರ್ಥ್ಯವರುವ ತಂತ್ರಜ್ಞರನ್ನು ಆಯ್ಕೆ ಮಾಡಲಾಗುವುದು. ರಂಗಾನುಭವ ಮತ್ತು ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು. ಮಾಸಿಕ ವೇತನ ಯಾವುದೇ ಭತ್ಯೆ ರಹಿತ ರೂ. 20 ಸಾವಿರಗಳು.
ಕಲಾವಿದರ ನೇಮಕದಲ್ಲಿ 4 ಮಹಿಳೆಯರು ಮತ್ತು 4 ಪ.ಜಾತಿ/ವರ್ಗದ ಕಲಾವಿದರಿಗೂ ಅವಕಾಶವಿದ್ದು, ಪ್ರಾದೇಶಿಕ ವಲಯದ, ರಂಗ ಪರಿಣಿತಿಹೊಂದಿರುವ/ರಂಗಪ್ರಯೋಗಗಳಲ್ಲಿ ಭಾಗವಹಿಸುವವರಿಗೆ/ ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದವರಿಗೆ/ರಂಗಶಿಕ್ಷಣದ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ನೇಮಕಗೊಂಡ ಕಲಾವಿದರು ರಪರ್ಟಿಯ ಭಾಗವಾಗಿದ್ದು, ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಮಾಸಿಕ ವೇತನ ಯಾವುದೇ ಭತ್ಯೆ ರಹಿತ ಸಂಚಿತ ವೇತನವಾಗಿ ತಿಂಗಳಿಗೆ ರೂ. 12,000, ಎರಡನೇಯ ವರ್ಷ ರೂ. 14,000 ಹಾಗೂ ಮೂರನೇ ವರ್ಷದಲ್ಲಿ ರೂ. 16,000ಗಳನ್ನು ನೀಡಲಾಗುವುದು. ಕಲಾವಿದರು 25 ವರ್ಷ ವಯೋಮಿತಿಯೊಳಗಿನವರಾಗಿರಬೇಕು.
ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತರು ಸ್ವವಿವರದೊಂದಿಗೆ ಜುಲೈ 18 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನ, ಅಶೋಕನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ 577202 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 08182-256353ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
Get In Touch With Us info@kalpa.news Whatsapp: 9481252093
Discussion about this post