ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮದುವೆ ಮನೆಯೊಂದರಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಯಲ್ಲಿದ್ದ 12 ಗ್ರಾಂ ಚಿನ್ನಾಭರಣವನ್ನು ಕಳುವು #Gold Theft ಮಾಡಿರುವ ಘಟನೆ ನಗರದ ಮುರಾದ್ ನಗರದ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಸಂಬಂಧಿಯೊಬ್ಬರ ಮದುವೆಗಾಗಿ ಮಂಗಳೂರಿನಿಂದ ಮಕ್ಕಳೊಂದಿಗೆ ಆಗಮಿಸಿದ್ದ ಮಹಿಳೆಯೊಬ್ಬರು ಪಾಲ್ಗೊಂಡಿದ್ದರು. ಊಟ ಮುಗಿಸಿಕೊಂಡು ಮದುವೆ ಮಂಟಪದ ಹತ್ತಿರ ಮಕ್ಕಳೊಂದಿಗೆ ಮಹಿಳೆಯ 7 ವರ್ಷದ ಮಗಳು ಆಟ ಆಡುತ್ತಿದ್ದರಿಂದ ಮಹಿಳೆ ಮಧ್ಯಾಹ್ನ ಊಟಕ್ಕೆ ಹೋಗಿ ಬಂದು ಮಗಳು ಕೂದಲ ಜುಟ್ಟು ಬಿಚ್ಚಿಕೊಂಡು ಆಟ ಆಡುತ್ತಿದ್ದನ್ನು ತಾಯಿ ಗಮನಿಸಿದ್ದಾಳೆ. ಮಗಳನ್ನು ಕರೆದು ನೋಡಿದಾಗ ಮಗಳ ಕೊರಳಿನಲ್ಲಿದ್ದ 12 ಗ್ರಾಂ ತೂಕದ ಸರ ಹಾಗೂ ಪೆಂಡೆಂಟ್ ಇರಲಿಲ್ಲ. ಅದರ ಮೌಲ್ಯ ಅಂದಾಜು 90 ಸಾವಿರ ರೂ.ಗಳು ಎನ್ನಲಾಗಿದೆ.
Also read: ಸಂಗೀತದಿಂದ ಸೌಹಾರ್ದ ಸಾಧನೆ ಸುಲಭ: ಶ್ರೀ ವೀರೇಶಾನಂದ ಸ್ವಾಮೀಜಿ ಅಭಿಮತ
ಈ ಬಗ್ಗೆ ಮಗಳಿಗೆ ಕೇಳಿದಾಗ ಯಾರೋ ಇಬ್ಬರು ಮಹಿಳೆಯರು ಕಲ್ಯಾಣ ಮಂಟಪದ ಡ್ರೆಸಿಂಗ್ ರೂಂಗೆ ಕರೆದುಕೊಂಡು ಹೋಗಿ ಮಗಳ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂದಿದೆ.
ಮದುವೆ ಮುಗಿಸಿಕೊಂಡು ತುರ್ತಾಗಿ ಮಂಗಳೂರಿಗೆ ತೆರಳಿದ್ದ ಮಹಿಳೆ ನಿನ್ನೆ ಮರಳಿ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ತುರ್ತು ಕೆಲಸಕ್ಕೆ ಮಹಿಳೆ ಹೋಗಬೇಕಾಗಿದ್ದರಿಂದ ಮಂಗಳೂರಿಗೆ ಹೋಗಿದ್ದು, ನಿನ್ನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post