ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಸ್ತುಬದ್ದವಾದ ನಡವಳಿಕೆಯನ್ನು ಅಳವಡಿಸಿಕೊಂಡು, ಉಲ್ಲಾಸ ಹಾಗೂ ಉತ್ಸಾಹದಿಂದ ಲವಲವಿಕೆಯಿಂದ ವಿದ್ಯೆ ಕಲಿಯಿರಿ ಎಂದು ಜೈನ್ ಪಬ್ಲಿಕ್ ಶಾಲೆಯ #JainPublicSchool ಪ್ರಾಂಶುಪಾಲರಾದ ಪ್ರಿಯದರ್ಶಿನಿ ಕರೆ ನೀಡಿದರು.
ಶಾಲೆಯಲ್ಲಿ ಎಕೋ ಕ್ಲಬ್, ಲಿಟರೇಚರ್ ಕ್ಲಬ್, ಟೂರಿಸಂ ಕ್ಲಬ್, ಹೆರಿಟೇಜ್ ಕ್ಲಬ್ ಉದ್ಘಾಟನೆಯ ವೇಳೆ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಿ, ಶಿಸ್ತುಬದ್ಧವಾದ ನಡವಳಿಕೆಯನ್ನು ಕಾಯ್ದುಕೊಂಡು ನಿಮ್ಮ ಅಮೂಲ್ಯವಾದ ಜವಾಬ್ದಾರಿಗಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಸದಾ ಚಟುವಟಿಕೆಯಿಂದ ಲವಲವಿಕೆಯಿಂದ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ನಾಲ್ಕು ಕ್ಲಬ್ ನ ಸದಸ್ಯರಾಗಿ ಶಿಕ್ಷಕರನ್ನು ಆಯ್ಕೆ ಮಾಡಲಾಯಿತು. ಪ್ರತಿ ಸದಸ್ಯ ಶಿಕ್ಷಕರು ಕ್ಲಬ್ ನ ಕುರಿತಾದಂತಹ ಮಾಹಿತಿ ಹಾಗೂ ಕ್ಲಬ್’ನಿಂದ ಆಗುವಂಥ ಶೈಕ್ಷಣಿಕ ಮಹತ್ವ ಮತ್ತು ಈ ವರ್ಷದಲ್ಲಿ ಮಾಡುವಂತಹ ಚಟುವಟಿಕೆಗಳನ್ನು ಪ್ರತಿ ಕ್ಲಬ್ ಶಿಕ್ಷಕ ಸದಸ್ಯರು ವಿವರಿಸಿದರು.
ಪರಿಸರ ಸ್ನೇಹಿಯಾದ ಇಕೋ ಕ್ಲಬ್ ನ್ನು ಧನ್ವಂತರಿ ಔಷಧಿವನ ಪ್ರಾರಂಭಿಸುವ ಮೂಲಕ ಔಷಧಿ ಸಸ್ಯಗಳ ಮಹತ್ವವನ್ನು ಔಷಧಿ ಸಸಿಗಳನ್ನು ನೆಡುವುದರ ಮೂಲಕ ತಿಳಿಸಿದರು.
ಲಿಟರೇಚರ್ ಕ್ಲಬ್’ನಲ್ಲಿ ಭಾಷೆಯ ಬೆಳವಣಿಗೆ, ಪುಸ್ತಕ ಓದುವುದರ ಮಹತ್ವ ಮತ್ತು ಪ್ರಯೋಜನಗಳನ್ನು ಸವಿವರವಾಗಿ ವಿವರಿಸಿದರು. ಪ್ರವಾಸದ ಮಹತ್ವ ಪ್ರವಾಸದಿಂದ ಶೈಕ್ಷಣಿಕ ಲಾಭಗಳನ್ನು ಹಾಗೂ ಪ್ರವಾಸ ಶಿಕ್ಷಣದ ಒಂದು ಭಾಗ ಎಂಬುದನ್ನು ಕುರಿತು ಟೂರಿಸಂ ಕ್ಲಬ್ ನ ಸದಸ್ಯ ಶಿಕ್ಷಕರು ವಿವರಿಸಿದರು.
ಹೆರಿಟೇಜ್ ಕ್ಲಬ್ ನ ಶಿಕ್ಷಕರು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಪ್ರಾಚೀನ, ಪುರಾಣ ಕಾಲದ ದೇವಾಲಯಗಳು ಸ್ಮಾರಕಗಳ ಕುರಿತು ಅರಿವು ಮೂಡಿಸಿದರು.
ಶಾಲಾ ಸಂಯೋಜಕರಾದ ದಿವ್ಯಾ ಶೆಟ್ಟಿ, ಶಾಲೆಯ ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕರು ವಿಜಯ್ ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post