ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಸೊರಬ, ಶಿರಾಳಕೊಪ್ಪ ಪುರಸಭೆ ಮತ್ತು ಹೊಳೆಹೊನ್ನೂರು, ಆನವಟ್ಟಿ ಪಟ್ಟಣ ಪಂಚಾಯ್ತಿ ವಾರ್ಡುಗಳ ಪುನರ್ ವಿಂಗಡಣೆ ಮಾಡಿ ಸಾರ್ವಜನಿಕರಿಂದ(ಬಾದಿತರಿಂದ) ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಲು ತಯಾರಿಸಿದ ಕರಡು ಅಧಿಸೂಚನೆ ಮತ್ತು ವಾರ್ಡುಗಳ ಕ್ಷೇತ್ರ ವಿಂಗಡಣೆಯ ವಿವರವಾದ ತಃಖ್ತೆಯನ್ನು ಕರ್ನಾಟಕ ರಾಜ್ಯದ ರಾಜ್ಯ ಪತ್ರದಲ್ಲಿ ಡಿಸೆಂಬರ್ 27 ರಂದು ಪ್ರಚುರಪಡಿಸಲಾಗಿದ್ದು, ಬಾದಿತರಾಗಬಹುದಾದ ಸಾರ್ವಜನಿಕರಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತು ಆಕ್ಷೇಪಣೆ/ಸಲಹೆಗಳನ್ನು ಈ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಕಚೇರಿ ವೇಳೆಯಲ್ಲಿ ಅಂದರೆ ಬೆಳಿಗ್ಗೆ 10.30 ರಿಂದ ಸಂಜೆ 5.30 ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ಲಿಖಿತವಾಗಿ ಪೂರಕ ಮಾಹಿತಿಯೊಂದಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post