ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ರಿಪ್ಪನ್ ಪೇಟೆ ತಾಲೂಕಿನ ಮುತ್ತಲ ಗ್ರಾಮದ ನದಿಯಲ್ಲಿ ಆಟವಾಡಲು ಹೋದ ಬಾಲಕ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮುತ್ತಲ ಗ್ರಾಮದ ವಾಸಿ ಶೇಷಗಿರಿ ಅವರ ಪತ್ನಿ ಮಧುಮತಿ ಅವರೊಂದಿಗೆ ಮಕ್ಕಳಾದ ಸಂಜಯ್ ಹಾಗೂ ಸಿದ್ದೇಶ್ ಬಟ್ಟೆ ತೊಳೆಯಲು ಮುತ್ತಲ ಹೊಳೆಗೆ ಹೋಗಿದ್ದರು. ಮಕ್ಕಳು ನೀರಿನಲ್ಲಿ ಆಟವಾಡುತ್ತಿರುವಾಗ 2ನೇ ಮಗ ಸಿದ್ದೇಶ್ (14) ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ಗುಂಡಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಎಂದು ತಿಳಿದುಬಂದಿದೆ.

ರಿಪ್ಪನ್‌ಪೇಟೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















