ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭಜನಾ ಪರಿಷತ್, ರವೀಂದ್ರನಗರ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ ಅರ್ಚಕ ವೃಂದ ಹಾಗೂ ಸಂಸ್ಕಾರ ಪ್ರತಿಷ್ಠಾನ (ಆರೋಗ್ಯ-ಆರಾಧನೆ-ಆಧ್ಯಾತ) ಇವರುಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 21ರ ಭಾನುವಾರ ಮಹಾಶಿವರಾತ್ರಿ ಹಾಗೂ ಲೋಕ ಕಲ್ಯಾಣಾರ್ಥ ನಡೆದ ಒಂದು ಕೋಟಿ ಓಂ ನಮಃ ಶಿವಾಯ ಜಪ ಯಜ್ಞ ಮಂಗಳೋತ್ಸವ ಹಾಗೂ ರುದ್ರಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 7ಗಂಟೆಗೆ ಗಣಪತಿ ಪೂಜೆ, ಗೋಪೂಜೆ, ಗುರುವಂದನಾ, ಸ್ವಸ್ತಿ ಪುಣ್ಯಾಹ ವಾಚನ, ದೇವನಾಂದಿ, ಮಹಾಗಣಪತಿ ಹೋಮ, ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ವಿಶೇಷ ಸೂಚನೆ:
ಆಸಕ್ತರು ರುದ್ರಹೋಮ ಹಾಗೂ ಅನ್ನಸಂತರ್ಪಣೆಗೆ ಬೇಕಾಗುವ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಬೇಳೆ, ಸಕ್ಕರೆ, ತುಪ್ಪ, ಎಣ್ಣೆ, ಉಬ್ಬರಿ, ತರಕಾರಿಗಳು ಇತ್ಯಾದಿ ದವಸ ಧಾನ್ಯಗಳನ್ನು ಸಮರ್ಪಿಸಬಹುದು.
ಕಾರ್ಯಕ್ರಮಕ್ಕೆ ದೇಣಿಗೆ ನೀಡಲಿಚ್ಛಿಸುವ ದಾನಿಗಳು ನೇರವಾಗಿ ಶಿವಮೊಗ್ಗ ಭಜನಾ ಪರಿಷತ್, ಈ ವಿಳಾಸಕ್ಕೆ ಸಲ್ಲಿಸಬಹುದು.
Name: BHAJANA PARISHATH, Bank & Branch: VIJAYA BANK, B.H. Road, Shimoga, A/ c No.: 119401011003535, IFSC Code: VIJB0001194
ಹೆಚ್ಚಿನ ಮಾಹಿತಿಗಾಗಿ ಭಜನಾ ಪರಿಷತ್ ಅಧ್ಯಕ್ಷ ಅ.ಪ. ರಾಮಭಟ್ಟರು ದೂ: 08182-276021, ಉಪಾಧ್ಯಕ್ಷ ಎನ್. ಶ್ರೀಧರ್ ಮೊ: 9448170417, ಕಾರ್ಯದರ್ಶಿ ಶಬರೀಶ್ ಕಣ್ಣನ್ ಮೊ: 9964072793 ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪ್ರಮುಖರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post