ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ರೋಟರಿ ಪೂರ್ವ ಸಂಸ್ಥಾಪಕ ಕಾರ್ಯದರ್ಶಿ, ರೋಟರಿ ಪೂರ್ವ ಶಾಲೆ ಹಾಗೂ ಚಿತಾಗಾರ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರಾದ ಆರ್.ಆರ್. ರುದ್ರಪ್ಪ ಅವರು ಇಂದು ಮಧ್ಯಾಹ್ನ 12 ಗಂಟೆಗೆ ನಿಧನರಾಗಿದ್ದಾರೆ.
ಮೃತರ ಸ್ವಗ್ರಹ ಆಲ್ಕೊಳದಲ್ಲಿ ಸಂಜೆ 6 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಂತರ ಮೃತರ ಕೋರಿಕೆಯಂತೆ ದೇಹವನ್ನು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀಡಲಾಗುತ್ತದೆ ಎಂದು ಅವರ ಪುತ್ರ ಆತ್ಮಾ ರಂಗಧೋಳ್ ತಿಳಿಸಿದ್ದಾರೆ.
ಸಂತಾಪ:
ಆರ್.ಆರ್.ರುದ್ರಪ್ಪನವರ ಅಗಲಿಕೆ ರೋಟರಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಎಸ್ ಗಣೇಶ್, ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಲ್. ರವಿ, ಕಡಿದಾಳ್ ಗೋಪಾಲ್, ಜಿ. ವಿಜಯ್ ಕುಮಾರ್, ವಸಂತ್ ಹೋಬಳಿದಾರ್, ಮಂಜುನಾಥ್ ಕದಂ, ಅಣಜಿ ಬಸವರಾಜ್, ಚಂದ್ರಶೇಖರಯ್ಯ, ಚಂದ್ರಹಾಸ್ ರಾಯ್ಕರ್ ಮತ್ತು ಎಲ್ಲಾ ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು, ಟ್ರಸ್ಟಿಗಳು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post