ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ತಮ್ಮ ಪುತ್ರ ಕೆ.ಈ. ಕಾಂತೇಶ್’ಗೆ K E Kantesh ಟಿಕೇಟ್ ಕೈತಪ್ಪುವುದು ಕೇವಲ ವದಂತಿಯಾಗಿದ್ದು, ಟಿಕೇಟ್ ದೊರೆಯುವ ಎಲ್ಲ ಭರವಸೆ ನಮಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ಹೀಗಾಗಿ, ಕಾಂತೇಶ್’ಗೆ ಟಿಕೇಟ್ ದೊರೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದಲ್ಲಿ ಚುನಾವಣಾ ಸಮಿತಿ ಎಂಬ ಒಂದು ವ್ಯವಸ್ಥೆಯಿದೆ. ರಾಜ್ಯ ಸಮಿತಿಯಿಂದ ಕೇಂದ್ರ ಸಮಿತಿಗೆ ಕಾಂತೇಶ್ ಹೆಸರು ಶಿಫಾರಸ್ಸು ಹೋಗಿದೆ. ನಾನೂ ಸಹ ಕೇಂದ್ರ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಹಾವೇರಿಯಿಂದ ಈವರೆಗೂ ಯಾರಿಗೂ ಟಿಕೇಟ್ ದೊರೆತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಾಂತೇಶ್’ಗೆ ಟಿಕೇಟ್ ದೊರೆಯುವ ಭರವಸೆ ಈಗಲೂ ಸಹ ಇದೆ ಎಂದಿದ್ದಾರೆ.
Also read: ಶಿವಮೊಗ್ಗ | ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ? ಸ್ವತಃ ಅವರೇ ನೀಡಿದ ಸ್ಪಷ್ಟನೆಯೇನು?
ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂದು ನಮ್ಮ ಪರವಾಗಿ ಪೋಸ್ಟ್ ಹಾಕಿದವರೊಂದಿಗೆ ಮಾತನಾಡಿ, ಸಮಾಧಾನ ಮಾಡಿದ್ದೇನೆ. ಅವರು ಅವರುಗಳ ಅಭಿಪ್ರಾಯ ಹೇಳಿದ್ದಾರೆ. ಆದರೆ, ಎಲ್ಲ ರೀತಿಯ ಪರಿಸ್ಥಿತಿ, ಪಕ್ಷದ ಹಿತ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಅಭಿಮಾನಿಗಳಿಗೆ ತಿಳಿಹೇಳಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















