ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಇಂದು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರವೀಂದ್ರ ನಗರದಿಂದ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳೊಂದಗೆ ಅಶೋಕ್ ನಾಯ್ಕ ಪೂಜೆ ಸಲ್ಲಿಸಿದರು. ಅಭಿಮಾನಿಗಳೇ ಅವರ ಠೇವಣಿ ಹಣ ನೀಡಿದರು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದರು. ಅವರ ಜೊತೆಗೆ ನೂರಾರು ಲಂಬಾಣಿ ಮಹಿಳೆಯರು ವಿಶಿಷ್ಟವಾದ ರೀತಿಯ ಲಂಬಾಣಿ ನೃತ್ಯ ಮಾಡಿದರು. ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ ನಾಯ್ಕ, ಗ್ರಾಂಮಾಂತರ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಡಬಲ್ ಇಂಜಿನ್ ಸರ್ಕಾರ ಮಾಡಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿಯೇ ನಮಗೆ ಶ್ರೀ ರಕ್ಷೆ. ಜನಸ್ತೋಮ ಆಗಮಿಸಿರುವುದನ್ನು ನೋಡಿದರೆ ಗೆಲುವು ನನ್ನದೇ ಎಂದು ಅನಿಸುತ್ತಿದೆ. ಪಕ್ಷದ ಕಾರ್ಯಕರ್ತರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಸಮಾಜದ ಆಶೀರ್ವಾದ ಇದೆ. ಬಾರೀ ಅಂತರದ ಗೆಲುವು ನನ್ನದಾಗಲಿದೆ ಎಂದರು.
Also read: ಕೆಆರ್ ಕ್ಷೇತ್ರದ ಆತಂಕ ನಿವಾರಣೆ: ಬಿಜೆಪಿಯಲ್ಲೇ ಉಳಿಯಲಿದ್ದಾರೆ ರಾಮದಾಸ್
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲೂ ಅನೇಕ ಅಭಿವೃದ್ಧಿಗಳಾಗಿದ್ದು, ಅಶೋಕ್ ನಾಯ್ಕ ಅವರು ಅವಿರತ ಶ್ರಮದಿಂದ ಈ ಸಾಧನೆ ಆಗಿದೆ. ಗ್ರಾಮಾಂತರ ಜನತೆ ಅವರನ್ನು ಬೆಂಬಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್. ರುದ್ರೇಗೌಡ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರತ್ನಾಕರ್ ಶೆಣೈ, ಎಸ್. ದತ್ತಾತ್ರಿ, ಅಶೋಕ್ ನಾಯ್ಕ ಅವರ ಪತ್ನಿ ಸೇರಿದಂತೆ ಸಹಸ್ರಾರು ಬಿಜೆಪಿ ಬೆಂಬಲಿಗರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post