ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸ್ನೇಹಿತರೊಂದಿಗೆ ಈಜಲು ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ #TungaBhadraRiver ಸಂಗಮದಲ್ಲಿ ನಡೆದಿದೆ.
ಶಿವಮೊಗ್ಗ #Shivamogga ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ಯುವಕ.
ಈತ ಹೊಳೆಹೊನ್ನೂರು ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿನಿತ್ಯ ಶಿವಮೊಗ್ಗದಿಂದ ಪಟ್ಟಣದ ಕಾಲೇಜು ವ್ಯಾಸಂಗಕ್ಕೆ ಬರುತ್ತಿದ್ದ ಈತ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ನಡೆದಿದೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















