ಕಲ್ಪ ಮೀಡಿಯಾ ಹೌಸ್
ಸಾಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಶನಿವಾರ ಕೊರೋನಾ ಸೋಂಕಿತೆ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡಿ ಎರಡು ಜೀವಗಳನ್ನು ಉಳಿಸಿದ್ದಾರೆ.
ತಮ್ಮ ಪ್ರಾಣವನ್ನು ಲೆಕ್ಕಿಸದೇ ವೈದ್ಯರ ತಂಡವೊಂದು 25 ವರ್ಷದ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಹೆರಿಗೆ ಮಾಡಿಸಿದ್ದಾರೆ.
ಈ ಹಿಂದೆ ಈ ರೀತಿಯ ಪಾಸಿಟಿವ್ ಪ್ರಕರಣ ಬಂದ ಸೊಂಕಿತರನ್ನು ಸಾಗರದಲ್ಲಿ ಶಸ್ತ್ರಚಿಕಿತ್ಸೆ ಮಾಡದೇ ಮೆಗ್ಗಾನ್ ಆಸ್ಪತ್ರೆಗೆ ರವಾನಿಸುತ್ತಿದ್ದರು. ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಶಾಸಕ ಹಾಲಪ್ಪ ವೈದ್ಯರ ಜೊತೆ ಮಾತನಾಡಿ ಇನ್ಮುಂದೆ ಈ ರೀತಿ ಆಗದೆ ಸೊಂಕಿತರಿಗೆ ಸಾಗರದಲ್ಲಿಯೇ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸಿದ್ದರು.
ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ರೋಗಿಗಳ ಜೀವ ಉಳಿಸುತ್ತಿರುವ ಇಂತಹ ವೈದ್ಯರಿಗೆ ಕಲ್ಪ ಮೀಡಿಯಾ ಹೌಸ್ ಕಡೆಯಿಂದ ಬಿಗ್ ಸಲ್ಯೂಟ್…
ಈ ತಂಡದಲ್ಲಿ ಪ್ರಸೂತಿ ತಜ್ಞ ಡಾ.ನಾಗೇಂದ್ರಪ್ಪ, ಅರವಳಿಕೆ ತಜ್ಞ ಡಾ.ಸುರೇಶ್, ಸಿಸ್ಟರ್ ಅನಿತಾ, ಚಂದ್ರು ಇದ್ದರು.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post