ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ನಾನು ತಪ್ಪು ಮಾಡಿಲ್ಲ. ದೋಷಮುಕ್ತರಾಗಿ ಹೊರ ಬರುತ್ತೇನೆ ಎಂಬ ಖಚಿತ ವಿಶ್ವಾಸ ನನಗಿತ್ತು ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ತಿಳಿಸಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಭಜನೆ, ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಈ ಹಿಂದೆಯೇ ಹೇಳಿದಂತೆ ನಮ್ಮ ಮನೆ ದೇವತೆ ತಾಯಿ ಚೌಡೇಶ್ವರಿ ದೇವಿ ಕೃಪೆಯಿಂದ ದೋಷಮುಕ್ತನಾಗಿ ಹೊರಬಂದಿರುವೆ ಎಂದರು.

ಆ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನವರು ಕೂಡ ನನಗೆ ದೂರವಾಣಿ ಮೂಲಕ ಅಣ್ಣಾ ನಿಮ್ಮ ತಪ್ಪಿಲ್ಲ ಎಂದು ಗೊತ್ತಿದೆ. ಪಕ್ಷದ ಅಣತಿ ಮೇರೆಗೆ ಪ್ರತಿಭಟನೆ ಮಾಡಿದ್ದೇವೆ. ದೋಷಮುಕ್ತರಾಗಿ ಹೊರಬರುತ್ತೀರಾ ಎಂದು ಹೇಳಿದ್ದರು. ಇವತ್ತು ಕೆಲವು ಕಾಂಗ್ರೆಸ್ ಮಿತ್ರರು ಅಭಿನಂದನೆ ಕೂಡ ಹೇಳಿದ್ದಾರೆ. ಬೆಳಗ್ಗೆಯಿಂದ ಸಾವಿರಾರು ಅಭಿಮಾನಿಗಳು, ಸಾಧು ಸಂತರು ದೂರವಾಣಿ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಾನು ಆಭಾರಿಯಾಗಿರುತ್ತೇನೆ ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಈಶ್ವರಪ್ಪನವರ ಮೇಲೆ ಆರೋಪ ಬರುತ್ತಿದ್ದಂತೆ ಬೇರೆ ಬೇರೆ ರೀತಿಯ ವಿಶ್ಲೇಷಣೆ ನಡೆಯಿತು. ಕಾನೂನು ದುರುಪಯೋಗ ಮಾಡಿಕೊಳ್ಳುವ ಅವಕಾಶವಿದೆ ಎಂದಿದ್ದರು. ಆದರೂ, ಈಶ್ವರಪ್ಪ ಅವರು ಪರಿಸ್ಥಿತಿ ಸಮರ್ಥವಾಗಿ ಎದುರಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಕೆ.ಇ. ಕಾಂತೇಶ್, ಜ್ಞಾನೇಶ್ವರ್, ಚನ್ನಬಸಪ್ಪ, ಪ್ರಭು, ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಅನಿತಾ ರವಿಶಂಕರ್, ಬಳ್ಳೆಕೆರೆ ಸಂತೋಷ್, ಇ. ವಿಶ್ವಾಸ್ ಮೊದಲಾವರಿದ್ದರು.










Discussion about this post