ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಂತ್ವನ ಟ್ರಸ್ಟ್ ವತಿಯಿಂದ ಗಾಜನೂರು ಅರಣ್ಯ ವಲಯ ಸಿಬ್ಬಂದಿಗಳಿಗೆ ಜಾಕೆಟ್ ಹಾಗೂ ಗಮ್ ಬೂಟ್ಸ್ ಗಳನ್ನು ಕೊಡುಗೆಯನ್ನಾಗಿ ನೀಡಲಾಯಿತು.
ಇಂದು ಗಾಜನೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಗಾಜನೂರು ಅರಣ್ಯ ವಲಯದ ಫಾರೆಸ್ಟ್ ವಾಚರ್ಸ್’ಗೆ ಟ್ರಸ್ಟ್ ವತಿಯಿಂದ ಜಾಕೆಟ್ ಹಾಗೂ ಗಮ್ ಬೂಟ್ಸ್ ಗಳನ್ನು ಕೊಡುಗೆಯನ್ನಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಾಂತ್ವನ ಟ್ರಸ್ಟಿನ ಅಧ್ಯಕ್ಷರಾದ ಅಭಿಲಾಶ್ ಮರಿಯಪ್ಪ, ಸಾಂತ್ವಾನ ಟ್ರಸ್ಟಿನ ಟ್ರಸ್ಟಿಗಳಾದ ವಿನಯ್ ಕೆ ಪ್ರಕಾಶ್, ಹಾಗೂ ಮಧುಸೂದನ್, ನಿರ್ದೇಶಕರುಗಳಾದ ವರದರಾಜ್, ಬಿಂದು ಕುಮಾರ್, ರಾಮೇನಕೊಪ್ಪ ಪ್ರದೀಪ್, ಹೊಸಕೊಪ್ಪದ ಶಿವಕುಮಾರ್, ವಿದ್ಯಾನಗರ ರಘು , ಪುನೀಲ್, ವಿನಯ್ ಮಲೆ ಶಂಕರ ,ರಂಜಿತ್, ಅರುಣ್, ನಾಗರಾಜ್ ಉಪಸ್ಥಿತರಿದ್ದರು.
ಗಾಜನೂರಿನ ಅರಣ್ಯ ವಲಯದ ಅಧಿಕಾರಿಯವರಾದ ವಿನಯ್ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಗಾಜುನೂರಿನ ಗ್ರಾಮಸ್ಥರಾದ ಶಿವಕುಮಾರ್, ಸುರೇಶ್, ಅಂಬರೀಶ, ಗಣೇಶಣ್ಣ, ಗಗನ್ ಕುಮಾರ್, ಸತೀಶ್ ಆರ್, ಮೋಹನ್ ರಾಜ್ ಈ ಸಂದರ್ಭದಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















