ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾರ್ಯಕರ್ತರಲ್ಲಿ ಸದಾ ಪಕ್ಷನಿಷ್ಠೆ ಇರಬೇಕು. ಪಕ್ಷದ ಒಟ್ಟಾರೆ ವ್ಯವಸ್ಥೆಯಲ್ಲಿ ಸದಾ ಚಟುವಟಿಕೆಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿಎಸ್ ಅರುಣ್ #D S Arun ಹೇಳಿದ್ದಾರೆ.
ಅವರಿಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಕ್ಕಿನ ಮನುಷ್ಯ ದೇಶದ ಏಕತೆಯ ರೂವಾರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ #Sardar Vallabai Patel ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಏಕತಾ ನಡಿಗೆ ಜಿಲ್ಲಾ ಕಾರ್ಯಗಾರ ಸರ್ದಾರ್ @150 ಉದ್ಘಾಟಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅನೇಕ ಬದಲಾವಣೆಗಳಾಗಲಿದೆ. ಈ ಸರ್ಕಾರದ ನಡೆಗಳನ್ನು ಜನ ಗಮನಿಸುತ್ತಿದ್ದು ಸರ್ಕಾರದ ಬಗ್ಗೆ ಅಸಹನೆ ತೋರಿಸುತ್ತಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಹೋರಾಟ ಮಾಡಿದ ತ್ಯಾಗಮಾಡಿದ ದಾರ್ಶನಿಕರ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾದ ಕರ್ತವ್ಯವಿದೆ. ಅಂತಹ ಮಹಾನ್ ವ್ಯಕ್ತಿತ್ವಗಳ ಬಗ್ಗೆ ದೇಶ ಕಟ್ಟಿದವರ ಬಗ್ಗೆ ಗೌರವ ಸೂಚಿಸಬೇಕು ಅವರಿಗಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಶಾಲಾ-ಕಾಲೇಜುಗಳಲ್ಲಿ ಅವರ ಜನ್ಮದಿನದಂದು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ಕಾಟಾಚಾರಕ್ಕೆ ದಾರ್ಶನಿಕರ ಜಯಂತಿಗಳು ಆಗಬಾರದು ಅವರ ಬಗ್ಗೆ ತಿಳಿದುಕೊಳ್ಳದಿದ್ದರೆ ಪ್ರೇರಣೆ ಸಿಗುವುದು ಹೇಗೆ ? 2014ರ ನಂತರ ಭಾರತದ ಬೆಳವಣಿಗೆ ಯಾವ ರೀತಿಯಲ್ಲಿ ಆಗಿದೆ ಅದರ ಮುಂಚೆ ಯಾವ ನಾಯಕರು ಆಳಿದ್ದರೂ, ದೇಶದ ಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಯುವಶಕ್ತಿಗೆ ತಿಳಿಸಬೇಕಾಗಿದೆ.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಪ್ರಮುಖರಾದ ಮಾಲತೇಶ್, ಅಭಿಯಾನದ ಸಂಚಾಲಕ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪದ್ಮಿನಿರಾವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಪದ್ಮಿನಿ ರಾವ್, ಕುಪೇಂದ್ರ, ಅಣ್ಣಪ್ಪ, ಮಂಗಳ ನಾಗೇಂದ್ರ, ಸುಮಾ ಭೂಪಾಳಂ, ಸಂತೋಷ್, ಸತೀಶ್ ರಾಮಿನಕೊಪ್ಪ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post