ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸವಳಂಗ ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆಯಲ್ಲಿನ ಹೊಂಡ ತಗ್ಗುಗಳನ್ನು ಮುಚ್ಚುವ ನೆಪದಲ್ಲಿ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲ್ಸೇತುವೆ ಉದ್ಘಾಟನೆಯಾಗುವ ಸಮಯದಲ್ಲೇ ಇಲ್ಲಿ ಕಳಪೆ ಕಾಮಗಾರಿ ಆಗಿದೆ. ಸೇತುವೆಯ ಜಾಯಿಂಟ್ ಗಳಲ್ಲಿ ಸರಿಯಾಗಿ ಫಿಲಪ್ ಮಾಡದೇ ಇರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ನೂರಾರು ವಾಹನ ಸವಾರರು ಮೈ ಕೈ ನೋವು, ಬೆನ್ನು ಸೊಂಟ ನೋವಿನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಸರ್ವೆಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.
Also read: ಬಿಗಿ ಕಾನೂನಿದ್ದರೂ ಭ್ರಷ್ಟಾಚಾರ ಯಾಕೆ ಕಡಿಮೆಯಾಗುತ್ತಿಲ್ಲ: ಜಿಲ್ಲಾ ಜಡ್ಜ್ ಅದ್ಬುತ ವಿವರಣೆ ಹೇಗಿದೆ ನೋಡಿ

ಇದು ಕೇವಲ ತೇಪೆ ಹಚ್ಚುವ ಕೆಲಸವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post