ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯ ನಾಗರೀಕರ ರಕ್ಷಣಾ ಸಮಿತಿಯು ಸಂಘ ಸಂಸ್ಥೆಗಳ ಅಧಿನಿಯಮದ ಅನ್ವಯ ಶಿವಮೊಗ್ಗದಲ್ಲಿ ನೋಂದಣಿಯಾಗಿದ್ದು ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳ ಪಟ್ಟಿ ಹೀಗಿದೆ.
ರಾಜ್ಯಾಧ್ಯಕ್ಷರಾಗಿ ಚಿಕ್ಕಮಗಳೂರಿನ ಟಿ.ಜಿ. ಮಂಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆರ್. ರಾಘವೇಂದ್ರ, ರಾಜ್ಯ ಮಹಿಳಾ ಅಧ್ಯಕ್ಷರಾಗಿ ಉಷಾ ಉತ್ತಪ್ಪ ಹಾಗೂ ಗೌರವಾಧ್ಯಕ್ಷರಾಗಿ ಶಿವಮೊಗ್ಗದ ಲಕ್ಷ್ಮೀ ಕಾಂತಪ್ಪ, ಉಪಾಧ್ಯಕ್ಷರಾಗಿ ಕೆ. ಶೇಖರ್, ಉಪಾಧ್ಯಕ್ಷರಾಗಿ ಆರ್. ರಮೇಶ್, ಉಪಾಧ್ಯಕ್ಷರಾಗಿ ಬೆಂಗಳೂರಿನ ಜನಾರ್ದನ ನಾಯ್ಕ, ಟಿ.ಎಸ್. ಸಚಿನ್, ಖಜಾಂಚಿಯಾಗಿ ಶಿವಮೊಗ್ಗ ವಿನೋದ್, ಸಹಕಾರ್ಯದರ್ಶಿಯಾಗಿ ಶಂಭುಲಿಂಗ, ರಾಜ್ಯ ಕಾನೂನು ಸಲಹೆಗಾರರಾಗಿ ಡಿ.ಬಿ. ಚಂದ್ರಕುಮಾರ್, ರಾಜ್ಯ ಸಲಹೆಗಾರರಾಗಿ ಶಬರೀಶ್, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್, ಹರೀಶ್, ರಾಜ್ಯ ಸಂಚಾಲಕರಾಗಿ ಮಲ್ಲೇಶಪ್ಪ ಹಾಗೂ ರುದ್ರೇಶ್ ಆಯ್ಕೆಯಾಗಿದ್ದಾರೆ.
ಸಮಿತಿಯ ಧ್ಯೇಯ ಸಂಘಟನೆ ಸೇವೆ ಹೋರಾಟವಾಗಿದ್ದು ಸಮಿತಿಯು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ಆರಂಭಿಸಲು ಉದ್ದೇಶಿಸಿದೆ. ಸಮಿತಿಯು ಮುಂದಿನ ದಿನಗಳಲ್ಲಿ ನಾಗರೀಕರ ಹಕ್ಕುಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ನಾಗರೀಕರ ಪರವಾಗಿ ನಿಲ್ಲಲು, ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳ ವಿರುದ್ಧವಾಗಿ ಹೋರಾಡಲು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಅಮಾಯಕರು, ನೊಂದ ರೈತರಿಗಾಗಿ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು, ವಿದ್ಯಾರ್ಥಿಗಳ ಬೆಂಬಲಕ್ಕಾಗಿ, ಸರ್ಕಾರದ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು, ಪರಿಸರ ಸಂರಕ್ಷಣೆಗಾಗಿ ನಿಲ್ಲಲು ಹಾಗೂ ಸಾಮಾಜಿಕ ಸೇವೆ ಸಾಮಾಜಿಕ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಇಟ್ಟುಕೊಂಡಿರುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post