ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ #Shahi Export Pvt Ltd ವತಿಯಿಂದ ಶಿಕಾರಿಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂ. ಮೌಲ್ಯದ ಸಿ ಬಿ ನ್ಯಾಟ್ ಯಂತ್ರ ಕೊಡುವ ಮೂಲಕ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಿದೆ.
ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ಯೋಜನೆಯಡಿ ಈ ಕೊಡುಗೆ ನೀಡಲಾಗಿದೆ.
ಪ್ರದಾನ ಮಂತ್ರಿ ಅವರ ಟಿ ಬಿ ಮುಕ್ತ ಭಾರತ ಎಂಬ ಹೆಗ್ಗಳಿಕೆಗೆ ಪೂರಕವಾಗಿ, ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಎಸ್ ಯೋಜನೆ ಅಡಿಯಲ್ಲಿ 20ಲಕ್ಷ ರೂಪಾಯಿ ಮೌಲ್ಯ ದ ಸಿ ಬಿ ನ್ಯಾಟ್ ಯಂತ್ರ ವನ್ನು ಹಸ್ತಾಂತರ ಮಾಡಲಾಯಿತು. ಈ ಯಂತ್ರವು ಅಲ್ಪ ಅವಧಿ ಯಲ್ಲಿ ನಿರ್ದಿಷ್ಟವಾದ ಫಲಿತಾಂಶದೊಂದಿಗೆ, ಏಕಕಾಲಕ್ಕೆ 4 ಜನರ ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದೆ. ಕಡಿಮೆ ಸಮಯದಲ್ಲಿ ಪರೀಕ್ಷೆಯ ಮೂಲಕ, ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ.

ಶಾಹಿಯ ಆಡಳಿತ ವಿಭಾಗದ ಜಿ.ಎಂ. ಲಕ್ಷಣ ಧರ್ಮಟ್ಟಿ, ಮಾನವ ಸಂಪನ್ಮೂಲ ವಿಭಾಗದ ಜಿ.ಎಂ. ಬೀನೇಶ್ ಕುಮಾರ, ಮಾನವ ಸಂಪನ್ಮೂಲ ವಿಭಾಗದ ಎಜಿಎಂ ಪ್ರಶಾಂತ್ ಎಂ ಆರ್. ವಿಭಾಗ, ಹಾಗೂ ಸಿ ಎಸ್ ಆರ್ ತಂಡದ ನಾಗಯ್ಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಡಿಟಿಓ ಶ್ರೀ ನಟರಾಜು, ಎಎಂ. ಓ ಅರುಣ್ ಕುಮಾರ್ ಹಾಜರಿದ್ದರು.
ಕೇಂದ್ರ ಕಾರಾಗೃಹದಲ್ಲಿ ಹೊಲಿಗೆ ತರಬೇತಿ:
ಶಾಹಿ ಎಕ್ಸ್ ಪೋರ್ಟ್ ಸಂಸ್ಥೆ ವತಿಯಿಂದ ಶಿವಮೊಗ್ಗದಲ್ಲಿರುವ ಕೇಂದ್ರ ಕಾರಾಗೃಹದ ಬಂಧಿ ನಿವಾಸಿಗಳಿಗೆ ಹೊಲಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಮಾರೋಪ ಸಮಾರಂಭ ಹಾಗೂ ಅರ್ಹತಾ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಯಿತು.

ಪ್ರಮಾಣ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬಂಧಿ ನಿವಾಸಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಭಾನು, ಶಾಹಿ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಕವಿತಾ ಪ್ರಸಾದ್, ಆಡಳಿತ ವಿಭಾಗದ ಜಿಎಂ ಲಕ್ಷ್ಮಣ ಧರ್ಮಟ್ಟಿ, ಕೇಂದ್ರ ಕಾರಾಗೃಹದ ಮುಖ್ಯ ಅಧ್ಯಕ್ಷಕ ಡಾ. ಬಿ ರಂಗನಾಥ್, ಶಿವಮೊಗ್ಗ ಡಿವೈಎಸ್ಪಿ ಅಂಜನಪ್ಪ ಕಾರಾಗೃಹದ ಸಹಾಯಕ ಅಧೀಕ್ಷಕಿ ಪ್ರೀತಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ತರಬೇತಿ ಅಧಿಕಾರಿಗಳಾದ ನಾಗರಾಜ್ ಕಿರಣ್ ಅವರನ್ನು ಅಭಿನಂಧಿಸಲಾಯಿತು. ತಿಮ್ಮಪ್ಪ ಪ್ರಾರ್ಥಿಸಿದರು, ತಿಪ್ಪೇಸ್ವಾಮಿ ಹಾಗೂ ಶಿವಾನಾಯ್ಕ ಅವರು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆ ಶಿಕ್ಷಕ ಗೋಪಾಲಕೃಷ್ಣ ಅವರು ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post