ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವಹಿಂದೂ ಪರಿಷತ್, ಶಕ್ತಿ ದೇವತೆಗಳ ಸಮಾಗಮ ಸಮಿತಿ ಶಿವಮೊಗ್ಗ ವತಿಯಿಂದ 26ನೇ ವರ್ಷದ ಶಕ್ತಿ ದೇವತೆಗಳ ಸಮಾಗಮ ಇಂದು ಕೋಟೆ ರಸ್ತೆಯ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆಯಿತು.
ಪ್ರತಿ ದೇವತೆಯ ಭಕ್ತಾಧಿಗಳು ಬೆಳಗ್ಗೆಯಿಂದಲೇ ಹಬ್ಬದ ರೀತಿಯಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆಯಲ್ಲಿ ತಮ್ಮ ದೇವರುಗಳೊಂದಿಗೆ ಕೋಟೆ ಶ್ರೀಸೀತಾರಾಮಂಜನೆಯ ದೇವಸ್ಥಾನಕ್ಕೆ ಆಗಮಿಸಿದರು. ಭಕ್ತಾಧಿಗಳು ಸಾಲುಗಟ್ಟಿ ಮಡಲಕ್ಕಿ ಸಮರ್ಪಿಸಿ ದೇವರ ದರ್ಶನ ಪಡೆದರು.
Also read: ಜೋಗ ಪ್ರವೇಶ ದ್ವಾರ ನಿರ್ಬಂಧ | ಈ ಎಲ್ಲಾ ಸ್ಥಳಗಳಿಂದ ಜಲಪಾತ ವೀಕ್ಷಣೆಗೆ ಅವಕಾಶ
ಮಧ್ಯಾಹ್ನ 12.30ಕ್ಕೆ ಸಮಾಗಮ ಪೂಜೆ, ನಂತರ ಭಜನೆ ಹಾಗೂ ಅನ್ನಪೂರ್ಣೆಶ್ವರಿ ಆರಾಧನೆ, ಮಡಿಲಕ್ಕಿ ಸಮರ್ಪಣೆ ಮಹಾಮಂಗಳರಾತಿ ದೀಪರಾಧನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಜೆ.ಆರ್.ವಾಸುದೇವ್, ಸಮಿತಿಯ ಪ್ರಮುಖರಾದ ನಾರಾಯಣ ವರ್ಣೇಕರ್, ಆನಂದರಾವ್ ಜಾಧವ್, ಅರವಿಂದರಾವ್ ಜಾಧವ್, ರಂಗಣ್ಣ, ಉಮಾಪತಿ, ಉಚ್ಚಂಗಪ್ಪ, ಅರ್ಚಕರಾದ ರಾಮಪ್ರಸಾದ್, ಪ್ರಮುಖರಾದ ದೀನದಯಾಳ್, ಮೋಹನ್ ರೆಡ್ಡಿ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















