ಕಲ್ಪ ಮೀಡಿಯಾ ಹೌಸ್ | ಇರುವಕ್ಕಿ(ಶಿವಮೊಗ್ಗ) |
ಹಿಪ್ಪುನೇರಳೆಯಲ್ಲಿ ಅಂತರ ಬೆಳೆಗಳಾಗಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಸಾವಯವ ಪದ್ಧತಿಯಲ್ಲಿ #OrganicFarming ಬೆಳೆಯಬಹುದು ಎಂದು ಪ್ರಗತಿಪರ ಸಾವಯವ ರೇಷ್ಮೆ ಕೃಷಿಕ ಶ್ರೀಧರ್ ಕೊರಗಿ ಸಲಹೆ ನೀಡಿದರು.
ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಎಸ್’ಸಿ ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸಾವಯವ ಕೃಷಿ ಮತ್ತು ರೇಷ್ಮೆ ಕೃಷಿ ಕುರಿತು ನಡೆದ ಗುಂಪು ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Also Read>> ಮದರಸಾಗಳಲ್ಲಿ ಮಕ್ಕಳಿಲ್ಲ ಎಂದರೆ ಈ ಸರ್ಕಾರ ಅವುಗಳನ್ನು ಮುಚ್ಚಿಬಿಡುತ್ತಾ? ಈಶ್ವರಪ್ಪ ಹೀಗೆ ಪ್ರಶ್ನಿಸಿದ್ದೇಕೆ?
ಸಾವಯವ ಹಿಪ್ಪುನೇರಳೆ ಕೃಷಿ ಮತ್ತು ರೇಷ್ಮೆ ಕೃಷಿ ಮಾಡುವ ವಿಧಾನವನ್ನು ವಿವರಿಸಿದರು. ಹಿಪ್ಪುನೇರಳೆಯಲ್ಲಿ ಅಂತರ ಬೆಳೆಗಳಾಗಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಬಹುದು ಎಂದರು.
ಸಾವಯವ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿ ಗೋಕೂಪಾಮೃತ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಮಾಡಿದರು.
ಡಾ. ಅರುಣ್ ಮಾತನಾಡಿ, ರೈತರು ಅಡಿಕೆಯಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು, ಪಪ್ಪಾಯ, ಜಾಯಿಕಾಯಿ, ನುಗ್ಗೆಕಾಯಿ ಮುಂತಾದವುಗಳನ್ನು ಬೆಳೆಯಬೇಕೆಂದು ಉತ್ತೇಜಿಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ `ಸಾವಯವ ಕೃಷಿ ಮತ್ತು ರೇಷ್ಮೆ ಕೃಷಿ’ ಕುರಿತು ಗುಂಪು ಚರ್ಚೆಯನ್ನು ಆಯೋಜಿಸಲಾಗಿತ್ತು.
ಶಿವಮೊಗ್ಗ ಕೃಷಿ ವಿವಿಯ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣ ರೆಡ್ಡಿ ಮತ್ತು ಕೃಷಿ ವಿಸ್ತರಣೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post