ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಋತುಬಂಧ(Menopause)ದ ಸಮಯದಲ್ಲಿ ಮಹಿಳೆಯರು ಶಾರೀರಿಕವಾಗಿ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಕುರಿತಾಗಿಯೂ ಸಹ ಹೆಚ್ಚಿನ ಗಮನಹರಿಸಬೇಕು ಎಂದು ಕೃಷಿ ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶಶಿಕಲಾ ಸಲಹೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಆಯೋಜಿಸಲಾಗಿದ್ದ `ಸದೃಢ ಸ್ತ್ರೀ’ ಎಂಬ ಶೀರ್ಷಿಕೆಯ ಆರೋಗ್ಯ ಅಭಿಯಾನದಲ್ಲಿ ಅವರು ಮಾತನಾಡಿದರು.
Also Read>> ಹಂಪಿ | ನರಹರಿ ತೀರ್ಥರ ಬೃಂದಾವನ ವಿಚಾರ | ಮಂತ್ರಾಲಯ ಮಠಕ್ಕೆ ಜಯ | ಶ್ರೀಗಳು ಹೇಳಿದ್ದೇನು?
ಮಹಿಳೆಯರು #Women ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು. ಕುಟುಂಬ ಮತ್ತು ಸಮಾಜದಲ್ಲಿ ಅವರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು.ಋತುಬಂಧದ #Menopause ಸಮಯದಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು. ಈ ಅವಧಿಯಲ್ಲಿ ಆಹಾರ, ವಿಶ್ರಾಂತಿ ಮತ್ತು ಆರೋಗ್ಯಪೂರ್ಣ ಜೀವನಶೈಲಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸ್ತ್ರೀರೋಗ #Gynecology ಹಾಗೂ ಪ್ರಸೂತಿ ತಜ್ಞರಾದ ಡಾ. ಚಂದುಶ್ರೀ ಅವರು, ಹೆರಿಗೆ ಮತ್ತು ಕಿಶೋರಾವಸ್ಥೆಯಲ್ಲಿ #Adolescence ಆರೋಗ್ಯದ ಮೇಲಿನ ಗಮನದ ಮಹತ್ವವನ್ನು ವಿವರಿಸಿದರು.
ಮಹಿಳೆಯರು ಈ ಅವಧಿಯಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಮತ್ತು ಅಗತ್ಯವಾದ ಮಾತ್ರೆ(Folicacid and Calcium)ಗಳನ್ನು ಬಳಸಬೇಕು. ಸ್ವಚ್ಛತೆಯ ಮೇಲೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ #Cancer ನಿರೋಧಕ ಲಸಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಈ ಲಸಿಕೆಗಳು ಮಹಿಳೆಯ ಆರೋಗ್ಯವನ್ನು ರಕ್ಷಿಸಲು ಅನಿವಾರ್ಯವಾಗಿವೆ ಎಂದರು.
ಈ ಅಭಿಯಾನದ ಭಾಗವಾಗಿ, ಗರ್ಭಧಾರಣೆಗೆ ಸಂಬಂಧಿಸಿದ ಸಲಹೆಗಳು, ಮಾಸಿಕ ಚಕ್ರದ ಸಮಸ್ಯೆಗಳನ್ನು ಪರಿಹರಿಸುವ ಸಲಹೆಗಳನ್ನು ನೀಡಲಿದೆ. ಅವರೇನು ಸರಿಯಾದ ಆಹಾರ ತೆಗೆದುಕೊಳ್ಳಬೇಕು, ಶಾರೀರಿಕ ಚಟುವಟಿಕೆ ಹಾಗೂ ಮಾನಸಿಕ ಆರೈಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.
ಅಭಿಯಾನವನ್ನು ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post