ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ಜನರ ಬಹುದಿನದ ಕನಸು ನನಸಾಗಿದೆ. ಪ್ರಧಾನ ಮಂತ್ರಿಗಳೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ಕೆಲವು ನ್ಯೂನತೆಗಳು ಆಗಿವೆ ಅದಕ್ಕಾಗಿ ವಿಷಾದಿಸುತ್ತೇವೆ ಎಂದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಾರು 2ಲಕ್ಷ ಜನರು ಬರಬಹುದೆಂಬ ಅಂದಾಜು ಮಾಡಲಾಗಿತ್ತು. 2 ಲಕ್ಷ ಜನರಿಗೆ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ 3ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಒಂದು ರೀತಿಯಲ್ಲಿ ಕ್ರೌಡ್ ಬಸ್ರ್ಟ್ ಆದಂತೆ ಆಗಿದೆ. ಕೆಲವರಿಗೆ ಕುಡಿಯಲು ನೀರು ಸಿಕ್ಕಿಲ್ಲ. ವiತ್ತೆ ಕೆಲವರಿಗೆ ಊಟ ವಿಳಂ¨ವಾಗಿದೆ. ಕೆಲವು ನ್ಯೂನತೆಗಳನ್ನು ಹೊರತುಪಡಿಸಿದರೆ ಕಾರ್ಯಕ್ರಮವಂತೂ ಯಶಸ್ವಿಯಾಗಿದೆ. ಭದ್ರತಾ ದೃಷ್ಟಿಯಿಂದ ನೀರಿನ ಬಾಟಲ್ ಅನ್ನು ಒಳಗಡೆ ಬಿಟ್ಟಿಲ್ಲವಾದ್ದರಿಂದ ಸಮಸ್ಯೆ ತುಸು ಹೆಚ್ಚಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದರು.
ಬಿಜೆಪಿಯ ಕಾರ್ಯಕರ್ತ ಮಲ್ಲಿಕಾರ್ಜುನ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋದಾಗ ಮೃತಪಟ್ಟಿರುವುದು ನೋವಿನ ಸಂಗತಿಯಾಗಿದೆ. ಅವರ ಮಕ್ಕಳಿಬ್ಬರು 10 ಮತ್ತು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ ಪಕ್ಷ ತೀರ್ಮಾನ ಕಗೊಳ್ಳಲಿದೆ. ಮತ್ತು ಪಕ್ಷದ ಚೌಕಟ್ಟಿನಲ್ಲಿ ಏನೆಲ್ಲಾ ಸಹಾಯ ಮಾಡಬಹುದು ಎಂಬುದನ್ನು ಕೂಡ ಯೋಚಿಸಲಾಗುವುದು ಎಂದರು.
ಪತ್ರಕರ್ತ ಹಾಲಸ್ವಾಮಿಯವರ ಘಟನೆಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ ಅವರು, ದಾವಣಗೆರೆ ಪೊಲೀಸ್ ಅಧಿಕಾರಿಯೊಬ್ಬರು ಹಾಲಸ್ವಾಮಿಯವರನ್ನು ವಿನಾಕಾರಣ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಮತ್ತು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
Discussion about this post