ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರತಿದಿನ 15-20 ಕೋವಿಡ್ ಮತ್ತು ನಾನ್ ಕೋವಿಡ್‌ನಿಂದ ಮೃತಪಟವರ ದೇಹಗಳು ಚಿತಾಗಾರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ ರೋಟರಿ ಚಿತಾಗಾರಕ್ಕೆ ಇಂದು ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತಗಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು:
ಈ ಸಂದರ್ಭದಲ್ಲಿ ಗ್ಯಾಸ್ ಮತ್ತು ಸೌದೆ ಚಿತಗಾರದ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಗಾಗಲೇ 6 ಕಟ್ಟಿಗೆ ಒಲೆ, ಎರಡು ಗ್ಯಾಸ್‌ಗಳಿವೆ. ಇವುಗಳ ಜೊತೆ ಹೆಚ್ಚುವರಿಯಾಗಿ 6 ಕಟ್ಟಿಗೆ ಒಲೆ ಹಾಗೂ ಎರಡು ಗ್ಯಾಸ್ ಒಲೆ ಹೆಚ್ಚಿಸಲು ಯೋಚಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ಚಿತಾಗರವನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಲಾಗುತ್ತಿದ್ದು, ಒಂದು ವಾರದ ಒಳಗೆ ಹೆಣ ಸುಡುವ ಒಲೆಗಳು ಬಾರದಿದ್ದರೆ ಬೆಂಗಳೂರಿನಿಂದ ತರಿಸಲು ಉದ್ದೇಶಿಸಿರುವ ಒಲೆಗಳನ್ನ ರದ್ದುಗೊಳಿಸಿ, ಭಾರತ್ ಫೌಂಡರಿ ಅಥವಾ ಸ್ಥಳೀಯವಾಗಿ ಸಿದ್ದಪಡಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಶಿವಕುಮಾರ್, ಎಸ್. ದತ್ತಾತ್ರಿ, ಕೆ.ಇ. ಕಾಂತೇಶ್, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post