ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾತ್ಮ ಗಾಂಧೀಜಿಯವರನ್ನು #Mahthma Gandhi ಸಿನಿಮಾ ನೋಡಿದ ಮೇಲೆ ಗೊತ್ತಾಯಿತು ಎಂದು ಹೇಳಿರುವ ಪ್ರಧಾನಿ ಮೋದಿಯವರ #PM Narendra Modi ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ #Kimmane Rathnakar ಹರಿಹಾಯ್ದು ಇಂತಹ ಪ್ರಧಾನಿ ನಮ್ಮ ದೇಶಕ್ಕೆ ಬೇಕಾ ಎಂದು ಪ್ರಶ್ನೆ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಗೊತ್ತಿದೆ. ಮಾರ್ಟಿನ್ ಲೂಥರ್, ನೆಲಸನ್ ಮಂಡೆಲ, ಚರ್ಚಿಲ್, ಐನ್‍ಸ್ಟಿನ್, ಲಾರ್ಡ್‍ಮೌಂಟ್ ಬ್ಯಾಟೆಂನ್ ಸೇರಿದಂತೆ ವಿಶ್ವದ ಅನೇಕ ಮಹಾನೀಯರು ಗಾಂಧೀಜಿಯವರನ್ನು ಹಾಡಿಹೊಗಳಿದ್ದಾರೆ. ಗಾಂಧೀಜಿಯವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಹೇಳಿದ್ದಾರೆ. ಸುಮಾರು 250 ದೇಶಗಳಲ್ಲಿ ಗಾಂಧೀಜಿಯವರ ಅಧ್ಯಯನ ಕೇಂದ್ರವಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗಾಂಧೀಜಿ ಕುರಿತು ಬಂದಿದೆ. 145ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಭವಿಷ್ಯ ಇವೆಲ್ಲವೂ ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ ಎಂದರು.
ಮೋದಿ ಅಕ್ಷರಸಃ ಈಗ ಹತಾಶರಾಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ತೆಗೆದುಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವಾತಂತ್ರದ ನಂತರ ಇಷ್ಟು ವರ್ಷಗಳಲ್ಲಿ ಆರ್‍ಎಸ್‍ಎಸ್ ಆಗಲಿ, ಬಿಜೆಪಿಯಾಗಲಿ ಮೀಸಲಾತಿ ಪರವಾಗಿ ಎಂದು ಇಲ್ಲ ಎಂದು ಟೀಕಿಸಿದರು.
Also read: ಹಾಸ್ಯ ಪ್ರಿಯರೇ, ಜೂ.1ರಂದು ನಗರದಲ್ಲಿ ನಡೆಯಲಿದೆ “ದನಾ ಕಾಯೋರ ದೊಡ್ಡಾಟ ಮತ್ತು ಶ್ರೀಕೃಷ್ಣ ಸಂಧಾನ” ನಾಟಕ
ನೈರುತ್ಯ ಪದವೀಧರ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಡಾ. ಕೆ.ಕೆ. ಮಂಜುನಾಥ್ ಅವರು ಸಮರ್ಥ ಕೆಲಸ ಮಾಡಿದ್ದಾರೆ. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ. ಆಯನೂರು ಮಂಜುನಾಥ್ ಬಿಜೆಪಿ ಪಕ್ಷ ಆಡಳಿತದಲ್ಲಿದ್ದಾಗ, ಪಕ್ಷದ ವಿರುದ್ಧವೇ ಪದವೀಧರರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದವರು. ಇಂತಹ ವ್ಯಕ್ತಿಗಳು ಗೆಲ್ಲಬೇಕು. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಇವರು ಗಟ್ಟಿಧ್ವನಿಯಾಗಿ ನಿಲ್ಲುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲೀಂ ಪಾಶ, ರಮೇಶ್ ಹೆಗಡೆ, ಚೇತನ್, ವಿಜಯ್‍ಕುಮಾರ್, ರಾಜೇಂದ್ರ, ದೇವೀಕುಮಾರ್, ಹಷೇಂದ್ರಕುಮಾರ್, ಆದರ್ಶ್ ಸೇರಿದಂತೆ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post